ಅನುಭವ ಮಂಟಪ ಉದ್ಘಾಟನೆ ಮಾಡಿದರೆ ನನಗೆ ಪುಣ್ಯ ಬರುತ್ತದೆ: ಸಿದ್ದರಾಮಯ್ಯ

ಬೀದರ್ : ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ನಾನೇ ಅನುಭವ ಮಂಟಪ ಉದ್ಘಾಟಿಸುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಬಸವ ಜಯಂತಿ ದಿನ ನಾನು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೆ.
ಅನುಭವ ಮಂಟಪ ಉದ್ಘಾಟನೆ ಮಾಡಿದರೆ ನನಗೆ ಪುಣ್ಯ ಬರುತ್ತದೆ ಎಂದರು. ನಾನು ಬಸವಣ್ಣನ ತತ್ವದ ಮೇಲೆ ನಂಬಿಕೆ ಇಟ್ಟವನು. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಸಮಾನ ಅವಕಾಶ ಸಿಗಬೇಕು. ಸರ್ಕಾರಿ ಕಚೇರಿಯಲ್ಲಿ ಬಸವಣ್ಣ ಫೋಟೋ ಇಡಲು ಆದೇಶ ಮಾಡಿದೆ ಎಂದರು.