ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ; ಕೇಜ್ರಿವಾಲ್ ತಿರುಗೇಟು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಸಚಿವ ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ ಎಂದು ಬಿಜೆಪಿಗೆ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಇತ್ತೀಚೆಷ್ಟೇ ಬಿಜೆಪಿ ಆರೋಪಿಸಿತ್ತು. ಇದಕ್ಕೆ ಕೇಜ್ರಿವಾಲ್, ಸತ್ಯೇಂದ್ರ ಜೈನ್‍ಗೆ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿತ್ತೋ ಹೊರತು ಮಸಾಜ್ ಅಲ್ಲ ಎಂದಿದ್ದಾರೆ.