ಮಗ ಮಳೆಯ ಆರ್ಭಟ, ಜನಜೀವನ ಸಂಪೂರ್ಣ ಅಸ್ತವ್ಯಸ್ಥ | Chikballapur |

ಮಗ ಮಳೆಯ ಆರ್ಭಟದಿಂದಾಗಿ ಚಿಕ್ಕಬಳ್ಳಾಪುರ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ. ರಾತ್ರಿಇಡೀ ಸುರಿದ ಮಳೆಗೆ ಮನೆ ಮಠಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಮಗಮಳೆ ರಾತ್ರಿಯಿಡೀ ಎಡಬಿಡದೆ ಸುರಿದ ಪರಿಣಾಮ ನಗರದ ತಗ್ಗುಪ್ರದೇಶಗಳು, ರಾಜಕಾಲುವೆಗಳು ಮುಚ್ಚಿ ಓವರ್ ಪ್ಲೋ ಆಗಿ ರಸ್ತೆ ಚರಂಡಿ ನೀರು ತುಂಬಿತ್ತು. ಕಳೆದೆರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿತ್ತು ಅದ್ರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾತ್ರಿಯಿಡೀ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದ ಕೆಲವು ಕಡೆ ರಾಜಕಾಲುವೆಯ ತಡೆಗೋಡೆ ಒಡೆದು ಮನೆ ಬಾಗಿಲುಗಳ ಬಳಿ ಮಳೆ ನೀರು ನುಗ್ಗಿವೆ. ೧೫ನೇ ವಾರ್ಡ್ಗೆ ಸೇರಿರುವ ರಾಜಕಾಲುವೆಯ ತಡೆಗೋಡೆ ಕುಸಿತದಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ, ಒಂಟಿ ಮನೆಯೊಂದರಲ್ಲಿ ಜೀವನ ನಡೆಸುತ್ತಿರುವ ಓರ್ವ ಮಹಿಳೆಯ ಶೀಟ್ ಮನೆ ಸಂಪೂರ್ಣ ಜಲಾವೃತಗೊಂಡಿದೆ. ೧೦ ಹಸುಗಳಿಗೆ ಮೇವಿಲ್ಲದಂತಾಗಿದೆ ರಾತ್ರಿಯಿಡೀ ಕಣ್ಣಿಗೆ ನಿದ್ದೆ ಇಲ್ಲದೆ ನೀರಿನಲ್ಲಿ ಜೀವನ ನಡೆಸಿದ್ದೇನೆ ಎಂದು ಆ ಮನೆ ವಾಸಿ ಲಕ್ಷ್ಮೀ ಕುಮಾರಿ ಅವಲತ್ತು ಕೊಂಡಿದ್ದಾರೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆ ನಾಶಗೊಂಡಿವೆ. ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾದಿಕಾರಿ ಆರ್.ಲತಾ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗದೆ ಸರಾಗವಾಗಿ ಹರಿದು ಹೋಗುವಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.