ಕೇಂದ್ರ ಬಜೆಟ್ ಎಂದರೇನು? ಸಂವಿಧಾನ ಏನೆನ್ನುತ್ತದೆ?
ಬಜೆಟ್ ಎಂದರೇನು?
ಸರ್ಕಾರ ಮುಂಬರುವ ಆರ್ಥಿಕ ವರ್ಷಕ್ಕೆ (Fiscal year) ತನ್ನ ಉದ್ದೇಶಿತ ಖರ್ಚುಗಳು ಮತ್ತು ಆದಾಯದ ವಿವರಗಳನ್ನು ಬಜೆಟ್ ಮೂಲಕ ಮುಂದಿಡುತ್ತದೆ. ಆರ್ಥಿಕ ವರ್ಷ ಏಪ್ರಿಲ್ 1ರಂದು ಆರಂಭವಾಗಿ ಮಾರ್ಚ್ 31ಕ್ಕೆ ಅಂತ್ಯವಾಗುತ್ತದೆ.
ಬಜೆಟ್ಗೆ ಸಂಬಂಧಿಸಿ ಸಂವಿಧಾನ ಏನು ಹೇಳುತ್ತದೆ?
ಬಜೆಟ್ಗೆ ಸಂಬಂಧಿಸಿ ಸಂವಿಧಾನದಲ್ಲಿ ಕೆಲವು ನಿಬಂಧನೆಗಳು ಇವೆ. ಅವುಗಳ ವಿವರ ಇಲ್ಲಿದೆ.
- ಸಂವಿಧಾನದ 112ನೇ ವಿಧಿಯ ಪ್ರಕಾರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಫೆಬ್ರವರಿಯ ಕೊನೆಯ ದಿನ ಅಥವಾ ಮೊದಲ ದಿನಕ್ಕೆ ಮುನ್ನ ಮಂಡಿಸಬೇಕು.
- ಸಂವಿಧಾನದ 114ನೇ ವಿಧಿಯ ಪ್ರಕಾರ ಭಾರತದ ಒಟ್ಟು ನಿಧಿ, ಕೇಂದ್ರ ಸರ್ಕಾರದ ಆದಾಯ ಮತ್ತು ಸಂಪನ್ಮೂಲ, ಸಾಲದ ಮೂಲಕ ಪಡೆಯುವ ಫಂಡ್ಗಳ ಬಗ್ಗೆ ಪ್ರತ್ಯೇಕ ಲೆಕ್ಕಪತ್ರಗಳನ್ನು ನೀಡಬೇಕು. ಇದಕ್ಕಾಗಿ ಮುಂಗಡಪತ್ರವನ್ನು ಮಂಡಿಸಬೇಕು.
- ಸಂವಿಧಾನದ 266ನೇ ವಿಧಿಯ ಪ್ರಕಾರ ಸರ್ಕಾರ ತೆರಿಗೆ ಮತ್ತು ಇತರ ಮೂಲಗಳಿಂದ ಪಡೆಯುವ ಆದಾಯದ ಲೆಕ್ಕವನ್ನು ನೀಡಬೇಕು.
- ಸಂವಿಧಾನದ 266(2) ವಿಧಿಯ ಪ್ರಕಾರ ಸರ್ಕಾರ ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾದ ಬಳಿಕ ಒಟ್ಟು ನಿಧಿಯಿಂದ ಹಣವನ್ನು ಪಡೆಯಬಹುದು. ಸಂಸತ್ತಿನ ಅಂಗೀಕಾರ ಇಲ್ಲದೆ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ.
- ಸಂವಿಧಾನದ 270ನೇ ವಿಧಿಯ ಪ್ರಕಾರ ಸರ್ಕಾರ ಪ್ರತಿ ರಾಜ್ಯದ ವೆಚ್ಚ ಮತ್ತು ಆದಾಯದ ಲೆಕ್ಕಾಚಾರವನ್ನು ಒಳಗೊಂಡ ಬಜೆಟ್ ಮಂಡನೆಯ ಅಗತ್ಯವಿದೆ.
- ಸಂವಿಧಾನದ 272ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ಕೆಲವು ತೆರಿಗೆ ಮತ್ತು ಸುಂಕಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸಬೇಕು.