ಛತ್ತೀಸ್ ಗಢದಲ್ಲಿ ಭೀಕರ ಅಪಘಾತ ; ಆಟೋಗೆ ಟ್ರಕ್ ಡಿಕ್ಕಿ ; 7 ಶಾಲಾ ವಿದ್ಯಾರ್ಥಿಗಳು ದುರ್ಮರಣ

ಛತ್ತೀಸ್ ಗಢದಲ್ಲಿ ಭೀಕರ ಅಪಘಾತ ; ಆಟೋಗೆ ಟ್ರಕ್ ಡಿಕ್ಕಿ ; 7 ಶಾಲಾ ವಿದ್ಯಾರ್ಥಿಗಳು ದುರ್ಮರಣ

ಕೊರಾರ್ : ಛತ್ತೀಸ್ ಗಢದ ಕಂಕರ್ ಜಿಲ್ಲೆಯ ಕೊರಾರ್ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಆಟೋಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿ ಮತ್ತು ಆಟೋ ಚಾಲಕ ಗಾಯಗೊಂಡಿದ್ದು, ಕೊರಾರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಜಿ ಬಸ್ತಾರ್ ಪಿ ಸುಂದರ್ರಾಜ್ ತಿಳಿಸಿದ್ದಾರೆ.

ಅಂದ್ಹಾಗೆ, ಅಪಘಾತದ ಕುರಿತು ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿಶಾದ ವ್ಯಕ್ತಪಡಿಸಿದ್ದು, ಗಾಯಗೊಂಡವರಿಗೆ ಸರ್ಕಾರ ಸಂಪೂರ್ಣ ವೈದ್ಯಕೀಯ ನೆರವು ನೀಡಲಿದೆ ಎಂದು ಹೇಳಿದ್ದಾರೆ.