ಈ ಬಾರಿ ಬಜೆಟ್‌ ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಈ ಬಾರಿ ಬಜೆಟ್‌ ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಬೆಂಗಳೂರು: ಈ ಬಾರಿ ಬಜೆಟ್‌ ನಲ್ಲಿ ಆರ್ಯ ವೈಶ್ಯ ನಿಗಮ ಮಂಡಳಿ ಮತ್ತು ಬ್ರಾಹ್ಮಣ ನಿಗಮ ಮಂಡಳಿಗೆ ತಲಾ 10 ಕೋಟಿ ಅನುದಾನ ನೀಡಲಾಗಿದೆ. ಅಷ್ಟೇ ಅಲ್ಲದೆ ವೇತನ ಬಿಡುಗಡೆಗೂ ಆದೇಶ ನೀಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಹೆಚ್ಚು ಅನುದಾನಕ್ಕೆ ಮನವಿ ಮಾಡಿದ್ದೇವೆ. ಆದರೂ ಅನುದಾನ ಕೊಟ್ಟಿಲ್ಲ. ಎರಡು ಸಮಾಜಕ್ಕೂ ಈ ಸರ್ಕಾರ ಅನ್ಯಾಯ ಮಾಡಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಾಮನ್ ಸಿಎಂ ಎಲ್ಲಾ ವರ್ಗಕ್ಕೂ ಕಾಮನ್ ಸಿಎಂ ಆಗಿ ಕೆಲಸ ಮಾಡಬೇಕು ಆಗ್ರಹಿಸಿದ್ದಾರೆ.

ಇನ್ನು ಬ್ರಾಹ್ಮಣ ನಿಗಮದಲ್ಲಿ 6 ಕೋಟಿ ಇದೆ. ಇದನ್ನ ಬಳಕೆ ಮಾಡಿಕೊಳ್ಳಿ. ಆರ್ಯ ವೈಶ್ಯ ನಿಗಮದಲ್ಲಿ ಅನುದಾನ ಇದೆ. ಹೆಚ್ಚುವರಿ ಅನುದಾನ ಕೊಡ್ತೀವಿ. ಆರ್ಯ ವೈಶ್ಯ ನಿಗಮ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.