ಸೋಲೇ ಗೆಲುವಿನ ಮೆಟ್ಟಿಲು: ಬಿಜೆಪಿ ವರಿಷ್ಠರಿಗೆ ಬಿಎಸ್ವೈ ಮತ್ತೆ ಸರ್ವಸ್ವ

ಸೋಲೇ ಗೆಲುವಿನ ಮೆಟ್ಟಿಲು: ಬಿಜೆಪಿ ವರಿಷ್ಠರಿಗೆ ಬಿಎಸ್ವೈ ಮತ್ತೆ ಸರ್ವಸ್ವ

ಜನನಾಯಕನೊಬ್ಬನನ್ನು ಮೂಲೆಗುಂಪು ಮಾಡುವುದು ಎಷ್ಟು ಕಷ್ಟ ಎನ್ನುವುದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ಬಿಜೆಪಿಯ ಹೈಕಮಾಂಡಿಗೆ ಅರಿವಾದಂತಿದೆ. ವಿಧಾನ ಪರಿಷತ್ ಚುನಾವಣೆಯ ಈ ವೇಳೆ, ಯಡಿಯೂರಪ್ಪ ಮತ್ತೆ ಪವರ್‌ಫುಲ್ ಆಗಿ ಹೊರಹೊಮ್ಮುತ್ತಿದ್ದಾರೆ.

ಒಲ್ಲದ ಮನಸ್ಸಿನಿಂದ ಕಣ್ಣೀರು ಹಾಕಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪನವರನ್ನು ಬಿಜೆಪಿ ವರಿಷ್ಠರು ಸೈಡ್ಲೈನ್ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಬರುತ್ತಿದ್ದರು. ಅವರ ಆಪ್ತರ ಮೇಲೆ ಆದಾಯ ತೆರಿಗೆ ದಾಳಿ ಕೂಡಾ ನಡೆದು ಹೋಯಿತು.

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಯಡಿಯೂರಪ್ಪ, ರಾಜ್ಯ ಪ್ರವಾಸಕ್ಕೆ ಮುಂದಾದರು. "ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ"ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ, ಅಮಿತ್ ಶಾಗೆ ಬಿಎಸ್ವೈ ರಾಜ್ಯದಲ್ಲಿ ಮತ್ತೊಂದು ಸೂಪರ್ ಪವರ್ ಸೆಂಟರ್ ಆಗುವುದು ಇಷ್ಟವಿರಲಿಲ್ಲ.

ರಾಜ್ಯ ಪ್ರವಾಸಕ್ಕೆ ಅನುಮತಿ ನೀಡದೇ ಸತಾಯಿಸಿದ ಅಮಿತ್ ಶಾ/ಜೆ.ಪಿ.ನಡ್ಡಾಗೆ ಯಡಿಯೂರಪ್ಪನವರು ತಮ್ಮ ಶಕ್ತಿಯೇನು ಎನ್ನುವುದನ್ನು ಉಪ ಚುನಾವಣೆಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಾಗಾಗಿ, ಬಿಜೆಪಿ ವರಿಷ್ಠರು ಸದ್ಯ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿಲ್ಲ. ಬಿಜೆಪಿ ವರಿಷ್ಠರಿಗೆ ಬಿಎಸ್ವೈ ಮತ್ತೆ ಸರ್ವಸ್ವ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯ ಕ್ಷೇತ್ರಕಳೆದ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಗೆದ್ದು, ಇನ್ನೊಂದರಲ್ಲಿ ಸೋತಿತ್ತು. ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಬಿಜೆಪಿ ಮುಗ್ಗರಿಸಿದ್ದು, ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದಿತ್ತು. ಜೊತೆಗೆ, ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆ ಕೂಡಾ. ಪಕ್ಷದಲ್ಲಿದ್ದ ಟಿಕೆಟ್ ಗೊಂದಲದಿಂದಾಗಿ ಪಕ್ಷ ಸೋಲುವಂತಾಯಿತು ಎನ್ನುವ ಮಾತಿದೆ. ಯಾಕೆಂದರೆ, ಆ ಭಾಗದ ಜನಪ್ರಿಯ ನಾಯಕ ದಿ. ಸಿ.ಎಂ.ಉದಾಸಿಯವರ ಸೊಸೆಗೆ ಟಿಕೆಟ್ ಎಂದು ನಿರೀಕ್ಷಿಸಲಾಗಿತ್ತು. ಇದಕ್ಕೆ ಯಡಿಯೂರಪ್ಪನವರ ಬೆಂಬಲ ಕೂಡಾ ಇತ್ತು. ಆದರೆ, ಬಿಜೆಪಿಯ ವರಿಷ್ಠರು ಬೇರೆಯೊಬ್ಬರಿಗೆ ಮಣೆ ಹಾಕಿದ್ದರು.ಬಹಿರಂಗ ಪ್ರಚಾರದಲ್ಲಿ ಒಲ್ಲದ ಮನಸ್ಸಿನಿಂದಲೇ ಭಾಗವಹಿಸಿದ್ದ ಬಿಎಸ್ವೈ

ಆಪ್ತರ ಮೇಲೆ ನಡೆದ ಐಟಿ ದಾಳಿಯ ಜೊತೆಗೆ, ತಮ್ಮ ಶಿಫಾರಸಿನವರಿಗೆ ಟಿಕೆಟ್ ನೀಡದೇ ಇದ್ದದ್ದು ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಹಿರಂಗ ಪ್ರಚಾರದಲ್ಲಿ ಒಲ್ಲದ ಮನಸ್ಸಿನಿಂದಲೇ ಭಾಗವಹಿಸಿದ್ದ ಬಿಎಸ್ವೈಗೆ ಕ್ಷೇತ್ರದ ಒಳಗುಟ್ಟಿನ ಅರಿವಿತ್ತು. ಇನ್ನು, ಬಿಎಸ್ವೈ ಪುತ್ರ ವಿಜಯೇಂದ್ರ ಕೂಡಾ, ಪ್ರಚಾರದ ಕೊನೆಯ ಹಂತದಲ್ಲಿ ಭಾಗವಹಿಸಿದ್ದರು. ಯಡಿಯೂರಪ್ಪ ಒಲ್ಲದ ಮನಸ್ಸು, ಕಾರ್ಯಕರ್ತರ ಆಕ್ರೋಶದಿಂದಾಗಿ ಹಾನಗಲ್ ನಲ್ಲಿ ಪಕ್ಷಕ್ಕೆ ಸೋಲಾಯಿತು. ಅಲ್ಲಿಗೆ, ಯಡಿಯೂರಪ್ಪನವರ ಶಕ್ತಿಯ ಅರಿವು ವರಿಷ್ಠರಿಗೆ ಆಯಿತು ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.ಯಡಿಯೂರಪ್ಪ ಸಹಿತವಾಗಿ ತಂಡವಾಗಿ ರಾಜ್ಯದಲ್ಲಿ ಬಿಜೆಪಿ ಜನಸ್ವರಾಜ್ ಯಾತ್ರೆ

ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಸಹಿತವಾಗಿ ತಂಡವಾಗಿ ರಾಜ್ಯದಲ್ಲಿ ಬಿಜೆಪಿ ಜನಸ್ವರಾಜ್ ಯಾತ್ರೆ ನಡೆಯಿತು. ಆದರೆ, ಬಿಎಸ್ವೈ ಬಯಸಿದ್ದ ಪ್ರವಾಸ ಇದಾಗಿರಲಿಲ್ಲ. ತನ್ನ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಪ್ರವಾಸ ಮಾಡಲು ಅವರು ಬಯಸಿದ್ದರು. ಈ ಪ್ರವಾಸ ಕೂಡಾ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ವಿಧಾನ ಪರಿಷತ್ ಚುನಾವಣೆಯ ವೇಳೆ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ.ಸೋಲೇ ಗೆಲುವಿನ ಮೆಟ್ಟಲು: ಬಿಜೆಪಿ ವರಿಷ್ಠರಿಗೆ ಬಿಎಸ್ವೈ ಮತ್ತೆ ಸರ್ವಸ್ವ ಹಾಗಾಗಿ, ವಿಧಾನ ಪರಿಷತ್ ಚುನಾವಣೆಗೆ ಯಡಿಯೂರಪ್ಪನವರಿಗೆ ಬಿಜೆಪಿ ವರಿಷ್ಠರು ಬಲ ನೀಡಿದರು. ಅವರ ಬೆಂಬಲಿತ ಅಭ್ಯರ್ಥಿಗಳಿಗೇ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಅನ್ನು ನೀಡಲಾಗಿದೆ. ಇದರಿಂದಾಗಿ, ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅವರ ಮೇಲಿದೆ. ಕುಮಾರಸ್ವಾಮಿ ಜೊತೆಗೆ ಬಾಹ್ಯ ಬೆಂಬಲದ ಪೀಠಿಕೆ ಇಟ್ಟಿದ್ದೇ ಬಿಎಸ್ವೈ. ಒಟ್ಟಿನಲ್ಲಿ ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ಹಾಗೇ, ಹಾನಗಲ್ ಸೋಲು ಬಿಎಸ್ವೈಗೆ ಬಲ ತುಂಬಿದೆ ಎಂದು ಹೇಳಬಹುದಾಗಿದೆ.