ಸೌರವ್ ಗಂಗೂಲಿ-ನಗ್ಮಾ ಲವ್ ಬ್ರೇಕಪ್ ಆಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ..!
ನವದೆಹಲಿ: ಸಿನಿಮಾ ನಟಿಯರು ಮತ್ತು ಕ್ರಿಕೆಟಿಗರು ಡೇಟಿಂಗ್ನಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ ಮತ್ತು ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಕೆಲವರು ಡೇಟಿಂಗ್ ಮಾಡಿ ಮದುವೆ ಆದವರು ಇದ್ದಾರೆ ಮತ್ತು ಬೇರೆಯಾದವರು ಇದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೂನ್ 8ರಂದು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಕ್ರೀಡಾತಾರೆಯರು ದಾದಾ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದೇ ವೇಳೆ ಕೆಲವರು ದಾದಾ ಮತ್ತು ನಟಿ ನಗ್ಮಾ ಬ್ರೇಕಪ್ ಸ್ಟೋರಿಯನ್ನು ಮೆಲಕು ಹಾಕಿದ್ದಾರೆ. ಇಬ್ಬರ ನಡುವಿನ ಪ್ರೀತಿ ಮುರಿದಿದ್ಹೇಗೆ ಎಂಬುದನ್ನು ತಿಳಿಯುವ ಹಂಬಲ ನಿಮ್ಮಲ್ಲಿ ಇದ್ದರೆ ಮುಂದೆ ಓದಿ…
ನಟಿ ನಗ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನಡುವಿನ ಸಂಬಂಧ ಬಹಳಷ್ಟು ಬಾರಿ ಚರ್ಚೆಯಾಗಿದೆ. ಆಗುತ್ತಲೇ ಇದೆ. 2000 ದಶಕದ ಆರಂಭದಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಅಷ್ಟರಲ್ಲಾಗಲೇ ಗಂಗೂಲಿ ಜನಪ್ರಿಯ ಡ್ಯಾನ್ಸರ್ ಡೊನಾ ಗಂಗೂಲಿಯನ್ನು ಮದುವೆಯಾಗಿದ್ದರಿಂದ ಈ ಸಂಬಂಧ ಅಸಾಮಾನ್ಯವಾಗಿತ್ತು
ಸಂದರ್ಶನವೊಂದರಲ್ಲಿ, ನಗ್ಮಾ ಅವರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾ, ಸಂಬಂಧದ ಆರೋಪಗಳನ್ನು ತಾನು ಎಂದಿಗೂ ನಿರಾಕರಿಸಲಿಲ್ಲ ಎಂದು ಹೇಳಿದ್ದರು.
ಅವರ ಬ್ರೇಕಪ್ ಹಿಂದಿನ ಕಾರಣದ ಬಗ್ಗೆ ಮಾತನಾಡುತ್ತಾ, 'ಬೇರೆ ವಿಷಯಗಳಲ್ಲದೆ ವೃತ್ತಿಜೀವನದ ಅಪಾಯವನ್ನು ಎದುರಿಸಬೇಕಾದ್ದರಿಂದ ಬ್ರೇಕಪ್ ಮಾಡಿಕೊಳ್ಳಬೇಕಾಯಿತು. ಬಹಳಷ್ಟು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಹೀಗಾಗಿ ಬ್ರೇಕಪ್ ಅನಿವಾರ್ಯ ಆಗಿತ್ತು ಎಂದಿದ್ದರು.
ಗಂಗೂಲಿಯ ಕಳಪೆ ಸಾಧನೆಗಾಗಿ ಜನರು ಅವಳನ್ನು ದೂಷಿಸಲು ಪ್ರಾರಂಭಿಸಿದ ಎಂದು ನಗ್ಮಾ ಬಹಿರಂಗಪಡಿಸಿದರು. ನೀವು ಬೇರೊಬ್ಬರ ಜೀವನವನ್ನು ದುಃಖಕ್ಕೆ ದೂಡುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ, ಮುಂದುವರಿಯುವುದು ಉತ್ತಮವಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ರಾಜಕೀಯಕ್ಕೆ ಕಾಲಿಡುವ ಮೊದಲು ನಗ್ಮಾ 2000ರ ದಶಕದಲ್ಲಿ ಪ್ರಮುಖ ನಟಿ. ಅವರು ತೆಲುಗು, ತಮಿಳು, ಮಲಯಾಳಂ, ಭೋಜ್‌ಪುರಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.