ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಚಿವರ ವಿರುದ್ದ ಎಫ್‌ಐಆರ್

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಚಿವರ ವಿರುದ್ದ ಎಫ್‌ಐಆರ್

ಬೆಂಗಳೂರು: ಚುನಾವಣಾ ಆಯೋಗವು ಈಗಾಗಲೇ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಅದಿನಿಂದ ಯಾವುದೇ ರೀತಿಯ ಚುನಾವಣೆ ಪ್ರಚಾರ ಮಾಡುವಂತಿಲ್ಲ ಎಂಬ ನಿಯಮವಿದೆ. ಇದರ ಬೆನ್ನಲೇ ಸಚಿವ ಕೆ.ಸಿ ನಾರಾಯಣಗೌಡ ಭಾವಚಿತ್ರ ಹಾಗೂ ಬಿಜೆಪಿ ಚಿಹ್ನೆ ಇರುವ ಬ್ಯಾಗ್‌ಗಳು ಪತ್ತೆಯಾಗಿವೆ.

ಸಚಿವ ಕೆ.ಸಿ.ಎನ್ ಭಾವಚಿತ್ರ ಇದ್ದ 500 ಬ್ಯಾಗ್ ಗಳನ್ನು ಎಂಸಿಸಿ ತಂಡದ ನೋಡಲ್ ಅಧಿಕಾರಿಗಳು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ. ಜಪ್ತಿ ವೇಳೆ 'ಯೂನಿಕ್ಸ್ ಪ್ರಾಡಕ್ಟ್ನಿಂದ ತಯಾರಾಗುವ ಬ್ಯಾಗ್‌ಗಳೆಂದು ತಿಳಿದು ಬಂದಿದೆ. ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡದ ನೋಡಲ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬ್ಲಾಗ್‌ಗಳನ್ನು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಬ್ಯಾಗ್‌ ಗಳ ಆಮಿಷವೊಡ್ಡಿ ಮತ ಸೆಳೆಯುವ ಉದ್ದೇಶದಿಂದ ಬಿಜೆಪಿ ಸಚಿವ ನಾರಾಯಣಗೌಡ ಸಂಗ್ರಹಿಸಿ ಇಟ್ಟಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಪ್ರಕರಣ ಸಂಬಂಧ ಸಚಿವ ನಾರಾಯಣಗೌಡ ಪ್ರತಿನಿಧಿಸುವ ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ಬಿಜೆಪಿ ಮುಖಂಡ ಗಂಗಾಧರ ಹಾಗೂ ಬ್ಯಾಗ್‌ ತಯಾರಿಸುವ ಫ್ಯಾಕ್ಟರಿ ಮಾಲೀಕ ಆಂಥೋಣಿ ಪ್ರಸಾದ್ ವಿರುದ್ಧ ಚಾಮರಾಜಪೇಟೆ ಪೊಲೀಸ್‌ ಫೋಲಿಸರು ಪ್ರಕರಣ ದಾಖಲಿಸಿದ್ದಾರೆ.