ಮುಂಬೈಗೆ ಇಂದು ಪ್ರಧಾನಿ ಮೋದಿ ಭೇಟಿ; 2 ಮೆಟ್ರೋ ಮಾರ್ಗ ಉದ್ಘಾಟನೆ

ಮುಂಬೈಗೆ ಇಂದು ಪ್ರಧಾನಿ ಮೋದಿ ಭೇಟಿ; 2 ಮೆಟ್ರೋ ಮಾರ್ಗ ಉದ್ಘಾಟನೆ

ಮುಂಬೈ: ಮಹಾರಾಷ್ಟ್ರದಲ್ಲಿ ನಿರ್ಮಿಸಲಾಗಿರುವ ಸುಮಾರು 12,600 ಕೋಟಿ ರೂ. ಮೌಲ್ಯದ ಎರಡು ಮೆಟ್ರೋ ಮಾರ್ಗವನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಮುಂಬೈ ಮೆಟ್ರೋ ರೈಲು ಮಾರ್ಗಗಳು 2A ಮತ್ತು 7ಗೆ ಮೋದಿ ಚಾಲನೆ ನೀಡುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಭದ್ರತಾ ದೃಷ್ಟಿಯಿಂದ ಕೆಲವೆಡೆ ಮಾರ್ಗಗಳನ್ನು ಕೂಡ ಬದಲಾಯಿಸಲಾಗಿದೆ. ಈ ಮಾರ್ಗಗಳ ಶಂಕುಸ್ಥಾಪನೆಯನ್ನು 2015ರಲ್ಲಿ ಮೋದಿ ನೆರವೇರಿಸಿದ್ದರು.