'ಪ್ರಯಾಣಿಕರ ಅನುಕೂಲ'ಕ್ಕಾಗಿ 'DGCA' ಮಹತ್ವದ ನಿರ್ಧಾರ ; ನೂತನ ಮಾರ್ಗಸೂಚಿ, ಇನ್ಮುಂದೆ ಹೀಗಾದ್ರೆ 'ಫ್ರೀ'ಯಾಗಿ ಪ್ರಯಾಣಿಸ್ಬೋದು

ನವದೆಹಲಿ : ನೀವು ಆಗಾಗ್ಗೆ ವಿಮಾನದಲ್ಲಿ ಪ್ರಯಾಣಿಸುತ್ತೀರಾ? ಹಾಗಿದ್ರೆ, ನಿಮಗಿದು ಒಳ್ಳೆಯ ಸುದ್ದಿಯಾಗಲಿದೆ. ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಸಿಎ ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದೆ. ಹಾಗಿದ್ರೆ, ವಿಮಾನ ಪ್ರಯಾಣಿಕರಿಗೆ ಯಾವೆಲ್ಲಾ ಪ್ರಯೋಜನಗಳು ಲಭ್ಯ ಅನ್ನೋದನ್ನ ನೋಡೋಣಾ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಿಮಾನಗಳ ರದ್ದತಿ ಮತ್ತು ವರ್ಗದ ವಿಮಾನ ಟಿಕೆಟ್ಗಳ ವರ್ಗಾವಣೆಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳನ್ನ ಪರಿಚಯಿಸಲಿದೆ.
ನಾವು ಮೇಲ್ದರ್ಜೆ'ಯಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿದಾಗ ಕೆಲವೊಮ್ಮೆ ನಮ್ಮ ಪಾಲ್ಗೊಳ್ಳುವಿಕೆ ಇಲ್ಲದೇ ವಿಮಾನಯಾನ ಸಂಸ್ಥೆಗಳು ಆ ಟಿಕೆಟ್ಗಳನ್ನ ಕೆಳ ವರ್ಗಕ್ಕೆ ವರ್ಗಾಯಿಸುತ್ತವೆ. ಆದ್ರೆ, ಇನ್ಮುಂದೆ ಹಾಗೆ ಮಾಡಿದರೆ, ನಿಮ್ಮ ಸಂಪೂರ್ಣ ಪ್ರಯಾಣ ವೆಚ್ಚವನ್ನ ವಿಮಾನಯಾನ ಸಂಸ್ಥೆಗಳು ಭರಿಸುತ್ತವೆ.