ನಾವು ಅಧಿಕಾರಕ್ಕೆ ಬಂದು 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ: ಸಿದ್ದರಾಮಯ್ಯ

ಬೆಳಗಾವಿ: ಏಳನೇ ವೇತನ ಆಯೋಗ ವರದಿ ಜಾರಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಷ್ಕರ ಮುಂದಾಗಿದ್ದರು.ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅಧಿಕಾರಕ್ಕೆ ಬಂದು 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದರು.
ಐದು ವರ್ಷಗಳ ಹಿಂದೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಿದ್ದೇನೆ. 10,600 ಕೋಟಿ ಹೊರೆಯಾದರೂ ನಾನು ಮಾಡಿದ್ದೆ. 6ನೇ ವೇತನ ಆಯೋಗ ಅನೌನ್ಸ್ ಮಾಡಿದ್ದೆ. ಎಲೆಕ್ಷನ್‌ಗೂ ಮುನ್ನ ಜಾರಿಗೆ ತಂದಿದ್ದೇನೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸುಳ್ಳು ಹೇಳುತ್ತಾರೆ. ಸುಳ್ಳು ಹೇಳಿ ಮೂಗಿಗೆ ತುಪ್ಪ ಸವರೋದು ಇವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ.
ಅವರು ಹೇಳಿದ ರೀತಿಯಲ್ಲಿ ಯಾವ ಕೆಲಸಗಳು ಆಗುವುದಿಲ್ಲ . ನೀತಿ ಸಂಹಿತೆ ಜಾರಿ ಆಗಲು 20 ದಿನ ಇರಬಹುದಷ್ಟೇ. ಮತ್ತೆ ಒಂದೂವರೆ ತಿಂಗಳು ಸರ್ಕಾರಿ ಕಚೇರಿಗಳು ಸ್ಥಗಿತ ಆಗುತ್ತವೆ. ಯಾವುದೇ ಕೆಲಸ ನಡೆಯಲ್ಲ. ಬಜೆಟ್ ಮಂಡಿಸುವರೆಗೂ ಬಜೆಟ್‌ನಲ್ಲಿದ್ದ 54 ಪರ್ಸೆಂಟ್ ಹಣ ಮಾತ್ರ ಖರ್ಚು ಮಾಡಿದ್ದಾರೆ. ಇನ್ನು 46 ಪರ್ಸೆಂಟ್ ಖರ್ಚು ಮಾಡಿರಲಿಲ್ಲ. ಒಂದು ತಿಂಗಳಲ್ಲಿ ನಿಮ್ಮ ಕೈಯಲ್ಲಿ ಖರ್ಚು ಮಾಡೋಕೆ ಆಗಲ್ಲರೀ ಅಂತಾ ಹೇಳಿದ್ದೇನೆ. ಈಗ ಸರ್ಕಾರಿ ನೌಕರರು ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಆಡಳಿತ ಯಂತ್ರ ಕುಸಿಯುತ್ತದೆ, ಕೆಲಸ ಆಗಲ್ಲ ಎಂದರು