ಕಾಂಗ್ರೆಸ್​ನಲ್ಲಿ 10 ಮಂದಿ ಸಿಎಂ ರೇಸ್ ನಲ್ಲಿದ್ದಾರೆ, ಆ ಹತ್ತು ಮಂದಿಯಲ್ಲಿ ನಾನೂ ಒಬ್ಬ: ಡಾ ಜಿ ಪರಮೇಶ್ವರ್

ಕಾಂಗ್ರೆಸ್​ನಲ್ಲಿ 10 ಮಂದಿ ಸಿಎಂ ರೇಸ್ ನಲ್ಲಿದ್ದಾರೆ, ಆ ಹತ್ತು ಮಂದಿಯಲ್ಲಿ ನಾನೂ ಒಬ್ಬ: ಡಾ ಜಿ ಪರಮೇಶ್ವರ್
ಕಾಂಗ್ರೆಸ್​ನಲ್ಲಿ ಸಿಎಂ ಗಾದಿಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ, ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಆಗಾಗ ಸುದ್ದಿಯಾಗುತ್ತಾರೆ. ಮಧುಗಿರಿ(ತುಮಕೂರು): ಕಾಂಗ್ರೆಸ್​ನಲ್ಲಿ ಸಿಎಂ ಗಾದಿಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ, ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಆಗಾಗ ಸುದ್ದಿಯಾಗುತ್ತಾರೆ.
ಚುನಾವಣೆ ಹೊತ್ತಿನಲ್ಲಿ ಪೈಪೋಟಿ ಬೆಳೆಯುತ್ತಲೇ ಇದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮಧ್ಯೆ ಈ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿರುತ್ತದೆ. ರೇಸ್​ಗೆ ಈಗ ಮತ್ತೊಬ್ಬರ ಸೇರ್ಪಡೆಯಾಗಲಿದ್ದಾರೆ. ಅವರು ಡಾ ಜಿ ಪರಮೇಶ್ವರ್.

ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಮಾತನಾಡುವ ವೇಳೆ ದಲಿತ ಸಮುದಾಯದ ನಾಯಕ ಪರಮೇಶ್ವರ್​​, ಕಾಂಗ್ರೆಸ್​ನಲ್ಲಿ 10 ಮಂದಿ ಸಿಎಂ ಆಗುವ ಕನಸು ಹೊತ್ತಿದ್ದಾರೆ, ಆ ಹತ್ತು ಮಂದಿಯಲ್ಲಿ ನಾನೂ ಒಬ್ಬ ಎಂದು ಹೇಳಿದ್ದು, ಸಿಎಂ ಕುರ್ಚಿಗೆ ತಾನು ಕೂಡ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಮಾಡಲ್ಲ, ಯಾರು ಸಮರ್ಥರಿದ್ದಾರೆ ಅಂಥವರನ್ನು ಸಿಎಂ ಮಾಡ್ತಾರೆ. ನಾನು ಯಾಕೆ ರಾಜಕೀಯ ಮಾಡ್ತಾ ಇದ್ದೀನಿ ಹೇಳಿ. ಅಧಿಕಾರಕ್ಕೆ ಬರಬೇಕು ಅಂತ ತಾನೇ ರಾಜಕಾರಣ ಮಾಡ್ತಿರೋದು.

ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ, ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ತಿರ್ಮಾನ ಮಾಡುತ್ತದೆ ಎಂದರು. ನಮ್ಮ ಗುರಿ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ನಂತರ ಸಿಎಂ ಯಾರಾಗುತ್ತಾರೆ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.