ಸಿಎಂ ಬೇಟಿಯಾದ ಶಾಸಕ ಸಾರಾ ಮಹೇಶ್: ಕುತೂಹಲ ಮೂಡಿಸಿದ ಮಾಜಿ ಸಚಿವ ನಡೆ

ಸಿಎಂ ಬೇಟಿಯಾದ ಶಾಸಕ ಸಾರಾ ಮಹೇಶ್: ಕುತೂಹಲ ಮೂಡಿಸಿದ ಮಾಜಿ ಸಚಿವ ನಡೆ

ಬೆಂಗಳೂರು: ಒಂದೆಡೆ ಐಎಎಸ್ ವರ್ಸಸ್ ಐಪಿಎಸ್ ಟಾಕ್ ವಾರ್ ಮುಂದುವರೆದಿದ್ದರೇ, ರೂಪಾ ಡಿ ವಿರುದ್ಧ ರೋಹಿಣಿ ಸಿಂಧೂರಿ ಪತಿ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ನಡುವೆ ತೀವ್ರ ಕುತೂಹಲ ಎನ್ನುವಂತೆ ಮಾಜಿ ಸಚಿವ ಸಾರಾ ಮಹೇಶ್ ಅವರು ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಬೇಟಿ ಮಾಡಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮುಗಿಸಿ ಹೊರ ಬಂದ ತಕ್ಷಣವೇ ಶಾಸಕ ಸಾರಾ ಮಹೇಶ್ ಅವರು ಸಿಎಂ ಬೊಮ್ಮಾಯಿ ಅವರನ್ನು ಬೇಟಿಯಾದರು.

ಸಿಎಂ ಬೊಮ್ಮಾಯಿ ಜೊತೆಗೆ ಕೆಲ ಕಾಲ ಮಾತುಕತೆ ನಡೆಸಿದಂತ ಅವರು, ತಮ್ಮ ಬಳಿಯಲ್ಲಿ ಇದ್ದಂತ ಕೆಲ ದಾಖಲನೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಐಪಿಎಸ್ ವರ್ಸಸ್ ಐಎಎಸ್ ಟಾಕ್ ವಾರ್ ಗೆ ಬ್ರೇಕ್ ಬೀಳೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂದಹಾಗೇ ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಐತಿಹಾಸಿಕ ಸ್ಮಾರಕದ ಜಾಗದಲ್ಲಿಯೇ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದನ್ನು ಶಾಸಕ ಸಾರಾ ಮಹೇಶ್ ಪ್ರಶ್ನಿಸಿ, ಸರ್ಕಾರಕ್ಕೆ ತನಿಖೆಗೆ ಒತ್ತಾಯಿಸಿದ್ದರು.

ಈ ನಡುವೆ ಕೆಲ ದಿನಗಳ ಹಿಂದೆ ರೋಹಿಣಿ ಸಿಂಧೂರಿಯವನ್ನು ಮಣಿವಣ್ಣನವರ್ ಸಾರಾ ಮಹೇಶ್ ಬಳಿಗೆ ಕರೆದೊಯ್ದು ಸಂಧಾನದ ಮಾತುಕತೆ ನಡೆಸಲಾಗಿತ್ತು ಎನ್ನಲಾಗಿದೆ. ಈ ಬಳಿಕ ಸಾರಾ ಮಹೇಶ್ ತಾವು ಇನ್ಮುಂದೆ ರೋಹಿಣಿ ಸಿಂಧೂರಿ ವಿರುದ್ಧ ಸಮರ ಸಾರಲ್ಲ. ಸರ್ಕಾರ ಅವರ ಬಗ್ಗೆ ನೀಡಿದಂತ ದೂರುಗಳಿಗೆ ಯಾವ ನಿರ್ಧಾರ ಕೈಗೊಳ್ಳುತ್ತದೋ ಕೈಗೊಳ್ಳಲಿ ಎಂದಿದ್ದರು.