ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಇಂಡಿಗೋ: ಫೆ.4 ರಿಂದ ಹುಬ್ಬಳ್ಳಿ-ಪುಣೆ ವಿಮಾನ ಹಾರಾಟ ಆರಂಭ

ವಿಮಾನ ಪ್ರಯಾಣಿಕರಿಗೆ ಇಂಡಿಗೋ ಒಂದು ಸಿಹಿ ಸುದ್ದಿಯನ್ನು ಕೊಟ್ಟಿದೆ. ಫೆಬ್ರವರಿ 4 ರಿಂದ ಹುಬ್ಬಳ್ಳಿ ಪುಣೆ ನೇರ ವಿಮಾನವನ್ನು ಪ್ರಾರಂಭಿಸಲು ಇಂಡಿಗೋ ನಿರ್ಧರಿಸಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಪ್ರಾಯಾಣಿಕರಿಂದ ನೇರ ವಿಮಾನದ ಬೇಡಿಕೆಯಿಂದಾಗಿ ಇಂಡಿಗೋ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ನೇರ ವಿಮಾನ ಹಾರಾಟ ಆರಂಭಿಸಲು ತೀರ್ಮಾನಿಸಿದೆ.
ವೇಳಾಪಟ್ಟಿಯ ಪ್ರಕಾರ, ಹುಬ್ಬಳ್ಳಿಯಿಂದ ಪುಣೆ ವಿಮಾನ (6E-7727) ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (HBX) ಫೆಬ್ರವರಿ 4 ರಂದು ಸಂಜೆ 6:30ಕ್ಕೆ ಹೊರಟು ಪುಣೆ ವಿಮಾನ ನಿಲ್ದಾಣವನ್ನು (PNQ) ಸಂಜೆ 7:40ಕ್ಕೆ ತಲುಪುತ್ತದೆ. ಪುಣೆಯಿಂದ ಹುಬ್ಬಳ್ಳಿ ವಿಮಾನ (6E-7716) ರಾತ್ರಿ 8:00 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ (PNQ) ಹೊರಟು ರಾತ್ರಿ 9:10 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಇಂಡಿಗೋ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗಳು ತೆರೆದಿರುತ್ತವೆ.