ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1

ಚೆನ್ನೈ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ವಿಶಾಖ ಪಟ್ಟಣ ಏಕದಿನ ಪಂದ್ಯವನ್ನು ಹೀನಾಯವಾಗಿ ಸೋತ ಭಾರತ ವೀಗ ನಂ.1 ರ್‍ಯಾಂಕಿಂಗ್ ಸ್ಥಾನವನ್ನು ಕಳೆದುಕೊಳ್ಳುವ ಹಾದಿಯಲ್ಲಿದೆ. ಚೆನ್ನೈಯಲ್ಲಿ ಬುಧವಾರ ನಡೆ ಯುವ ನಿರ್ಣಾಯಕ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದರಷ್ಟೇ ಈ ಸ್ಥಾನ ಉಳಿಯಲಿದೆ.
ಮುಂಬಯಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯ ವನ್ನು ಭಾರತ 5 ವಿಕೆಟ್‌ಗಳಿಂದ ಜಯಿ ಸಿತ್ತು. ಆದರೆ ವಿಶಾಖಪಟ್ಟಣದಲ್ಲಿ ಎಲ್ಲ ವಿಭಾಗಗಳಲ್ಲೂ ಮುಗ್ಗರಿಸಿ 10 ವಿಕೆಟ್ ಸೋಲಿಗೆ ತುತ್ತಾಯಿತು. ಚೆನ್ನೈಯಲ್ಲಿ ಸರಣಿ ಗೆಲುವಿಗೆ ತೀವ್ರ ಪೈಪೋಟಿ ಕಂಡುಬರಲಿದೆ.
ಭಾರತವೀಗ 114 ಅಂಕಗ ಳೊಂದಿಗೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ 112 ಅಂಕಗಳೊಂದಿಗೆ ದ್ವಿತೀಯ ಸ್ಥಾನ ದಲ್ಲಿದೆ. ಟೀಮ್ ಇಂಡಿಯಾ ಜಯ ಸಾಧಿಸಿದರೆ ಅಗ್ರಸ್ಥಾನಕ್ಕೇನೂ ಧಕ್ಕೆ ಆಗದು. ಆಗ ಭಾರತದ ಅಂಕ 115ಕ್ಕೆ ಏರಲಿದೆ. ಆಸ್ಟ್ರೇಲಿಯ ಗೆದ್ದರೆ ಎರಡೂ ತಂಡಗಳೂ ಸಮಾನ 113 ಅಂಕಗಳನ್ನು ಹೊಂದಲಿವೆ. ದಶಮಾಂಶ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯ ಮುನ್ನಡೆ ಗಳಿಸುವ ಸಾಧ್ಯತೆ ಇದೆ. ಭಾರತವೀಗ ಟೆಸ್ಟ್ ಹಾಗೂ ಟಿ20 ಮಾದರಿಯಲ್ಲೂ ನಂ.1 ತಂಡವಾಗಿದೆ.