ವಿದೇಶಗಳಿಗೂ ಭಾರತೀಯರು ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸಬಹುದು; ಇಲ್ಲಿದೆ ಅಂತಹ ದೇಶಗಳ ವಿವರ

ವಿದೇಶಗಳಿಗೆ ಪ್ರವಾಸ ಹೋಗಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಬೇರೆ ಬೇರೆ ರಾಷ್ಟ್ರಗಳ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಎಲ್ಲರಲ್ಲೂ ಸಹಜ. ಆದರೆ ವಿದೇಶಕ್ಕೆ ಹೋಗಬೇಕೆಂದರೆ ಪಾಸ್ ಪೋರ್ಟ್ ಬೇಕು.
ಈ ಎರಡು ದೇಶಗಳೆಂದರೆ ಭೂತಾನ್ ಮತ್ತು ನೇಪಾಳ. ಭೂತಾನ್‌ಗೆ ಭೇಟಿ ನೀಡಲು, ನೀವು ಮತದಾರರ ಗುರುತಿನ ಚೀಟಿಯನ್ನು ಒಯ್ಯಬಹುದು. ಮಕ್ಕಳು ತಮ್ಮ ಜನ್ಮ ಪ್ರಮಾಣಪತ್ರ ಅಥವಾ ಶಾಲೆಯ ಗುರುತಿನ ಚೀಟಿಯನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ನೇಪಾಳಕ್ಕೆ ಹೋಗಲು ಬಯಸಿದರೆ ನೀವು ಭಾರತದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಂದ ನೇಪಾಳದ ಕಠ್ಮಂಡುವಿಗೆ ವಿಮಾನ ಸೇವೆಗಳನ್ನು ಪಡೆಯಬಹುದು. ಭಾರತೀಯರಿಗೆ ಅವರ ಪೌರತ್ವವನ್ನು ಸಾಬೀತುಪಡಿಸುವ ದಾಖಲೆ ಮಾತ್ರ ಅಗತ್ಯವಿದೆ. ಇದಕ್ಕಾಗಿ ಅವರು ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ತೋರಿಸಬಹುದು.
ಭೂತಾನ್ ಮತ್ತು ನೇಪಾಳವನ್ನು ಹೊರತುಪಡಿಸಿ, ಕೆಲವು ದೇಶಗಳಿಗೆ ಹೋಗಲು ಪಾಸ್‌ಪೋರ್ಟ್ ಅಗತ್ಯವಿದೆ ಆದರೆ ವೀಸಾ ಬೇಕೆಂದಿಲ್ಲ. ಒಟ್ಟಾರೆಯಾಗಿ ಪ್ರಪಂಚದಾದ್ಯಂತ 58 ಪ್ರವಾಸಿ ತಾಣಗಳಿಗೆ ನೀವು ವೀಸಾ ಇಲ್ಲದೆ ಪ್ರಯಾಣಿಸಬಹುದು. ಇವುಗಳಲ್ಲಿ ಮಾಲ್ಡೀವ್ಸ್, ಮಾರಿಷಸ್, ಥೈಲ್ಯಾಂಡ್, ಮಕಾವೊ, ಶ್ರೀಲಂಕಾ, ಭೂತಾನ್, ನೇಪಾಳ, ಕೀನ್ಯಾ, ಮ್ಯಾನ್ಮಾರ್, ಕತಾರ್, ಕಾಂಬೋಡಿಯಾ, ಉಗಾಂಡಾ, ಸೆಶೆಲ್ಸ್, ಜಿಂಬಾಬ್ವೆ ಮತ್ತು ಇರಾನ್ ಸೇರಿವೆ. ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೆಯೇ ನೀವು ಭಾರತದಿಂದ ನೇಪಾಳ ಪ್ರವಾಸದ ಪ್ಯಾಕೇಜ್‌ಗಳನ್ನು ತೆಗೆದುಕೊಳ್ಳಬಹುದು.
ಇದಕ್ಕಾಗಿ ಭಾರತ ಸರ್ಕಾರದಿಂದ ನೀಡಲಾದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ಹೊಂದಿರಬೇಕು ಅಥವಾ ಭಾರತದ ಚುನಾವಣಾ ಆಯೋಗವು ನೀಡಿದ ಚುನಾವಣಾ ಗುರುತಿನ ಚೀಟಿಯನ್ನು ಹೊಂದಿರಬೇಕು. ನೇಪಾಳದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನೀವು ಕಠ್ಮಂಡುವಿಗೆ ಭೇಟಿ ನೀಡಬಹುದು, ಇದು ಅನೇಕ ಪವಿತ್ರ ಮತ್ತು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ಚಿತ್ವಾನ್ ರಾಷ್ಟ್ರೀಯ ಉದ್ಯಾನವನವು ಅತ್ಯಂತ ಸುಂದರ ತಾಣಗಳಲ್ಲೊಂದು. ವನ್ಯಜೀವಿಗಳ ಬಗ್ಗೆ ಆಸಕ್ತಿ ಇರುವವರು ಇಲ್ಲಿಗೆ ವಿಸಿಟ್ ಮಾಡಿ. ಎವರೆಸ್ಟ್, ಅನ್ನಪೂರ್ಣ ಮತ್ತು ಲ್ಯಾಂಗ್ಟಾಂಗ್ ಟ್ರೆಕ್ಕಿಂಗ್ ಪ್ರದೇಶಗಳು. ಪೋಖರಾ ನೇಪಾಳದಲ್ಲಿ ಚಾರಣಿಗರಿಗೆ ಹಾಟ್‌ಸ್ಪಾಟ್ ಆಗಿದೆ.
ಭಾರತೀಯರು ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿಯೊಂದಿಗೆ ಸುಲಭವಾಗಿ ಭೂತಾನ್‌ಗೆ ಪ್ರಯಾಣಿಸಬಹುದು. ಈ ನೆರೆಯ ದೇಶಕ್ಕೆ ಪ್ರಯಾಣಿಸಲು ಅವರಿಗೆ ವೀಸಾ ಅಗತ್ಯವಿಲ್ಲ, ಆದರೆ ಪ್ರವೇಶವನ್ನು ಪಡೆಯಲು ಮಾನ್ಯವಾದ ಫೋಟೋ ಗುರುತಿನ ಕಾರ್ಡ್ ಅನ್ನು ಮಾತ್ರ ಒದಗಿಸಬೇಕಾಗುತ್ತದೆ. ಭೂತಾನ್ ಸಾಂಪ್ರದಾಯಿಕ ಬೌದ್ಧ ಸಂಸ್ಕೃತಿಯನ್ನು ಸುಂದರವಾಗಿ ಪ್ರತಿಬಿಂಬಿಸುವ ಸ್ಥಳ. ಇದನ್ನು ಕೊನೆಯ ಶಾಂಗ್ರಿಲಾ ಎಂದು ಕರೆಯಲಾಗುತ್ತದೆ. ರಾಜಧಾನಿ ಥಿಂಪು ಹಿಮಾಲಯ ಪರ್ವತಗಳ ಎತ್ತರದ ಶ್ರೇಣಿಗಳಲ್ಲಿ ನೆಲೆಸಿದೆ ಮತ್ತು ಸುತ್ತಮುತ್ತಲಿನ ಹಸಿರ ಸಿರಿ, ರೈಡಾಕ್ ನದಿಯ ಅದ್ಭುತ ನೋಟ ಬಹಳ ಸುಂದರವಾಗಿದೆ. ಹಲವಾರು ದೇವಾಲಯಗಳು, ಸ್ಮಾರಕಗಳು ಮತ್ತು ಬೊಂಡೆ ಲಖಾಂಗ್, ಖಂಗ್ಖು ಲಖಾಂಗ್, ಟಾಗೋ ಲಖಾಂಗ್, ಡ್ರುಕ್ ಚೋಡಿಂಗ್ ಮತ್ತು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಂತಹ ಅನೇಕ ತಾಣಗಳು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ.