ಕ್ಲಾಸಿಗೆ ಚಕ್ಕರ್‌‌ ಮಧ್ಯಾಹ್ನವೇ ಎಣ್ಣೆ ಪಾರ್ಟಿಗೆ ಹಾಜರ್‌‌..

ಕ್ಲಾಸಿಗೆ ಚಕ್ಕರ್‌‌ ಮಧ್ಯಾಹ್ನವೇ ಎಣ್ಣೆ ಪಾರ್ಟಿಗೆ ಹಾಜರ್‌‌..

ರಾಯಚೂರು: ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ಮಧ್ಯಾಹ್ನ ಬಾರ್‌ಗಳಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿರುವ ಘಟನೆ ಜಿಲ್ಲೆಯ ಹಟ್ಟಿಯಲ್ಲಿ ನಡೆದಿದೆ. ಲಿಂಗಸುಗೂರು ತಾ|ನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಪ್ರೌಢ ಶಾಲಾ ಮುಖ್ಯಶಿಕ್ಷಕ ಮುರಳೀಧರ್‌ ರಾವ್‌ ನೇತೃತ್ವದಲ್ಲೇ ಈ ಪಾರ್ಟಿ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಕೆಲವೊಮ್ಮೆ ಪಾಠ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅವರನ್ನು ಅಮಾನತು ಮಾಡಬೇಕು ಎಂದು ಪೋಷಕರು ಡಿಡಿಪಿಐ & ಸರ್ಕಾರವನ್ನು ಒತ್ತಾಯಿಸಿದ್ದಾರೆ.