ರಾಜ್ಯ ಸರ್ಕಾರದಿಂದ ಮೀನುಗಾರರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಮೀನುಗಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ 2022-23ನೇ ಸಾಲಿನಲ್ಲಿ ಕರರಹಿತ 25000 ಕಿಲೋ ಲೀಟರ್ ಡೀಸೆಲ್ ಹೆಚ್ಚುವರಿಯಾಗಿ ವಿತರಿಸಲು ಸರ್ಕಾರ ಆದೇಶಿಸಿದೆ.
2021-22ನೇ ಸಾಲಿನಿಂದ ಸರ್ಕಾರವು ಕರರಹಿತ ಡೀಸೆಲ್‌ನ್ನು ಡೆಲಿವರಿ ಪಾಯಿಂಟ್‌ನಲ್ಲಿ ವಿತರಿಸಲು ಆದೇಶಿಸಿರುವುದಾಗಿ, 2022-23ನೇ ಸಾಲಿನ ಆರ್ಥಿಕ ವರ್ಷ ಏಪ್ರಿಲ್ ಮಾಹಯಿಂದ ಅನ್ವಯವಾಗುವಂತೆ ದೋಣಿಗಳಿಗೆ ವಾರ್ಷಿಕ ಕರರಹಿತ ಡೀಸಲ್ ಮಿತಿ 1.50 ಲಕ್ಷ ಕಿಲೋಲೀಟರ್ ನಿಗದಿಪಡಿಸಿದೆ ಎಂದು ತಿಳಿಸುತ್ತಾ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.), ರವರು ಮನವಿಯನ್ನು ಸಲ್ಲಿಸಿ, ಯಾಂತ್ರಿಕ ದೋಣಿಗಳಿಗೆ ನೀಡುತ್ತಿರುವ ಕರರಹಿತ ಡೀಸೆಲ್ ಕೋಟಾ ಡಿಸೆಂಬರ್‌ಗೆ ಮುಗಿಯುತ್ತಿದ್ದು ಸದರಿ ಕೋಟಿ ಸಾಕಾಗುತ್ತಿಲ್ಲವಾದ್ದರಿಂದ ಪ್ರಸ್ತುತ ನಿಗದಿಯಾಗಿರುವ ವಾರ್ಷಿಕ ಮಿತಿ 1.50 ಲಕ್ಷ ಕಿಲೋಲೀಟರ್‌ನ್ನು 2.00 ಲಕ್ಷ ಕಿಲೋಲೀಟರ್‌ಗೆ ಹೆಚ್ಚಿಸಲು ಕೋರಿರುವುದಾಗಿ ತಿಳಿಸಿರುತ್ತಾರೆ.
ಮುಂದುವರೆದು, ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿದ ಪ್ರಮಾಣ 150 ಲಕ್ಷ ಕಿಲೋ ಲೀಟರ್ ಗಳಲ್ಲಿ ಜನವರಿ ಮಾಹೆಯ ಅಂತ್ಯಕ್ಕೆ, 1.40 ಲಕ್ಷ ಕಿಲೋ ಲೀಟರ್ ವಿತರಣೆಯಾಗಿದ್ದು ಕೇವಲ 10.000 ಕಿಲೋ ಲೀಟರ್ ಮಾತ್ರ ಬಾಕಿ ಇರುತ್ತದೆ. ಅಲ್ಲದೇ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಚಂಡಮಾರುತ ಮತ್ತು ಪ್ರಕೃತಿ ವಿಕೋಪಗಳು ಕಡಿಮೆ ಇರುವುದರಿಂದ ದೋಣಿಗಳು ಹೆಚ್ಚಿನದಾಗಿ ಮೀನುಗಾರಿಕೆಗೆ ತೆರಳುವುದರಿಂದ ಈ ಸಮಯದಲ್ಲಿ ಡೀಸಲ್ ಪ್ರಮಾಣವು ಅತ್ಯಗತ್ಯವಾಗಿದೆ. ಆದರಿಂದ ಇದುವರೆವಿಗೂ ವಿತರಣೆಯಾಗಿರುವ ಪುಮಾಣವನ್ನು ವಿಶ್ಲೇಷಿಸಿದರೆ, ಪುತಿಮಾಹೆಗೆ ಸರಾಸರಿ ಸುಮಾರು 17500 ಕಿಲೋಲೀಟರ್ ಪ್ರಮಾಣ ಬೇಕಾಗಿರುವುದು ಮಾಹೆಗೆ 17500 ಕಿಲೋ ಲೀಟರ್ ನಂತ ಲೆಕ್ಕಾಚರಿಸಿದರೆ ಫೆಬ್ರವರಿಯಿಂದ ಮಾರ್ಚ್ ವರೆಗೆ ಎರಡು ತಿಂಗಳಿಗೆ ಕನಿಷ ಒಟ್ಟು 35000 ಕಿಲೋಲೀಟರ್ ಪ್ರಮಾಣ ಬೇಕಾಗಿರುವುದು ಪ್ರಸ್ತುತ ಬಾಕಿ ಉಳಿದಿರುವ 10000 ಕಿಲೋ ಲೀಟರ್ ಪ್ರಮಾಣ ಹೊರತುಪಡಿಸಿದರೆ, ಹೆಚ್ಚುವರಿಯಾಗಿ 25000 ಕಿಲೋಲೀಟರ್ ಪ್ರಮಾಣ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ, ಮಾರ್ಚ್ 2023 ಮಾಹವರೆಗೆ ಸುಮಾರು 25000 ಕಿಲೋಲೀಟರ್ ಪುಮಾಣದಷ್ಟು ಹೆಚ್ಚುವರಿ ಕಲರಹಿತ ಡೀಸಲ್ ನ್ನು ಯಾಂತ್ರಿಕೃತ ಮೀನುಗಾರಿಕೆ ದೋಣಿಗಳಿಗೆ ವಿತರಿಸಲು ಅನುವಾಗುವಂತೆ ಡೀಸೆಲ್ ಪ್ರಮಾಣವನ್ನು ನಿಗದಿಪಡಿಸಿ ಆದೇಶಿಸುವಂತೆ ಕೋರಿರುತ್ತಾರೆ.