ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಡ್ರೋನ್ ಹಾರಾಟ : `FIR' ದಾಖಲು

ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಡ್ರೋನ್ ಹಾರಾಟ : `FIR' ದಾಖಲು

ಬೆಂಗಳೂರು : ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಡ್ರೋನ್ ಹಾರಾಟ ನಡೆಸಿರುವ ಘಟನೆ ನಡೆದಿದ್ದು, ಘಟನೆ ಸಂಬಂಧ ಸೇನಾಧಿಕಾರಿಗಳು ದೂರು ದಾಖಲಿಸಿದ್ದಾರೆ.ನವೆಂಬರ್ 9 ರಂದು ಬೆಂಗಳೂರಿನ ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ನಲ್ಲಿರುವ ಪ್ಯಾರಾ ಮಿಲಿಟರಿ ಕ್ಯಾಂಪ್ ನಲ್ಲಿ ಸಂಜೆ 6.30 ರಿಂದ 7 ರ ಅವಧಿಯಲ್ಲಿ ಡ್ರೋನ್ ಹಾರಾಟ ನಡೆಸಿತ್ತು. ಇದನ್ನು ಸೇನಾಧಿಕಾರಿಗಳು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸದ್ಯ ಪೊಲೀಸರು ನಿರ್ಬಂಧಿತ ಮಿಲಿಟರಿ ಭೂ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.