ರೈಲಿನಲ್ಲಿ ಪ್ರಯಾಣಿಸುವಾಗ ಇಲಿ ಕಡಿತ: ಸಂತ್ರಸ್ತೆಗೆ 20 ಸಾವಿರ ರೂ. ಪರಿಹಾರ ನೀಡಲು ಆದೇಶ

ಕೊಯಿಕ್ಕೋಡ್: ರೈಲಿನಲ್ಲಿ ಪ್ರಯಾಣಿಸುವಾಗ ಇಲಿಯ ಕಡಿತದಿಂದ ಬಳಲಿದ ಪ್ರಯಾಣಿಕಳಿಗೆ 20 ಸಾವಿರ ರೂ. ಪರಿಹಾರ ನೀಡುವಂತೆ ಕೊಯಿಕ್ಕೋಡ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಭಾರತೀಯ ರೈಲ್ವೆ ಇಲಾಖೆಗೆ ಆದೇಶಿಸಿದೆ.
ದೂರು ನೀಡಿದ ಸಂತ್ರಸ್ತ ಮಹಿಳೆಯನ್ನು ಛರೋಡ್ ನಿವಾಸಿ ಸಲೇ ಜೇಮ್ಸ್ ಎಂದು ಗುರುತಿಸಲಾಗಿದೆ.
ದೂರುದಾರರು ಪ್ರಯಾಣಿಸಿದ ಎರಡನೇ ಎಸಿ ಕೋಚ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಇಲಿ ಹೊರಗಿನಿಂದ ಲಗೇಜ್ ಮೂಲಕ ಪ್ರವೇಶಿಸಿರಬಹುದು ಎಂದು ರೈಲ್ವೆ ಇಲಾಖೆ ವಾದಿಸಿತ್ತು. ಆದರೆ, ರೈಲ್ವೆಯ ನಿರ್ಲಕ್ಷ್ಯ ಮತ್ತು ಗುಣಮಟ್ಟವಿಲ್ಲದ ಸೇವೆಯಿಂದ ದೂರುದಾರರು ಇಲಿ ಕಡಿತಕ್ಕೆ ಒಳಗಾಗಿದ್ದಾರೆ ಎಂಬುದನ್ನು ಆಯೋಗ ಗಮನಿಸಿತ್ತು.
20,000 ರೂ. ಪರಿಹಾರದ ಜೊತೆಗೆ ಆಯೋಗವು ಆಕೆಯ ಚಿಕಿತ್ಸೆಯ ವೆಚ್ಚಕ್ಕೆ 1,000 ರೂ. ಮತ್ತು ಕಮಿಷನ್ ವೆಚ್ಚಕ್ಕಾಗಿ ರೂ. 2,000 ನೀಡುವಂತೆ ರೈಲ್ವೆಗೆ ನಿರ್ದೇಶನ ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. (ಏಜೆನ್ಸೀಸ್)