ಬಡ್ತಿ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ವರ್ಗಾವಣೆ ಬಳಿಕ ಬಡ್ತಿ ನೀಡಿಕೆ

ಬೆಂಗಳೂರು: ರಾಜ್ಯದ ಅನೇಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಬಡ್ತಿಯ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಬಡ್ತಿ ಇಲ್ಲದೇ 1,300 ಶಿಕ್ಷಕರು ನಿವೃತ್ತಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ವರ್ಗಾವಣೆಯ ಬಳಿಕ ಬಡ್ತಿಯನ್ನು ಶಿಕ್ಷಕರಿಗೆ ನೀಡಲಾಗುವುದಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಹೇಳಿದ್ದಾರೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್ ವಿಶಾಲ್ ಮಾತನಾಡಿ, ಮಾಹಿತಿ ನೀಡಿದ್ದು, ಬಡ್ತಿಗೆ ಅರ್ಹತೆ ಪಡೆದಿರುವಂತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರನ್ನು, ವರ್ಗಾವಣೆ ಪ್ರಕ್ರಿಯೆ ಮುಗಿದ ಬಳಿಕ, ಎಲ್ಲಾ ಶಿಕ್ಷಕರಿಗೂ ಬಡ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಮುನ್ನವೇ ಬಡ್ತಿ ನೀಡಲು ಸಾಧಅಯವೇ ಎಂದು ಪ್ರಶ್ನಿಸಿದಾಗ, ಇದು ಸಾಧ್ಯವಿಲ್ಲ. ವರ್ಗಾವಣೆ ಪ್ರಕ್ರಿಯೆ ಎಂದಿನಂತೆ ನಡೆಯಲಿದೆ. ಮಾರ್ಚ್ 9ಕ್ಕೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮಾರ್ಚ್ 31ರೊಳಗೆ ನಿವೃತ್ತಿ ಹೊಂದರಿಲುವಂತ ಅರ್ಹರಿಗೆ ಬಡ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಅನೇಕ ಶಿಕ್ಷಕರು ಪ್ರತಿ ತಿಂಗಳು ನಿವೃತ್ತರಾಗುತ್ತಿರುತ್ತಾರೆ. ಹೀಗೆ ನಿವೃತ್ತರಾಗುವಂತ ಶಿಕ್ಷಕರನ್ನು ಪರಿಗಣಿಸಿ ಬಡ್ತಿ ನೀಡುತ್ತಾ ಹೋದರೇ, ವರ್ಗಾವಣೆ ಅಸಾಧ್ಯವಾಗಿದೆ. ವರ್ಗಾವಣೆ ಪ್ರಕ್ರಿಯೆ ಮುಗಿದ ಬಳಿಕ, ಬಡ್ತಿ ನೀಡಲಾಗುವುದಾಗಿ ಹೇಳಿದರು.