ಆಧಾರ್-ಪ್ಯಾನ್ ಕಡ್ಡಾಯ ಜೋಡಣೆಯಿಂದ ಯಾರಿಗೆ ವಿನಾಯಿತಿ? ಇಲ್ಲಿದೆ ಮಾಹಿತಿ...

ಇವೆಲ್ಲದರ ಪರಿಣಾಮ ಹೆಚ್ಚಿನ ದರದಲ್ಲಿ ತೆರಿಗೆ ಕಡಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಆಧಾರ್- ಪ್ಯಾನ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಸಿಬಿಡಿಟಿಯ 2017 ರ ಅಧಿಸೂಚನೆಯಡಿಯ ಪ್ರಕಾರ ಈ ಕೆಳಕಂಡ ರೀತಿಯ ವ್ಯಕ್ತಿಗಳಿಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿರುವುದಿಲ್ಲ. ಅಸ್ಸಾಂ, ಜಮ್ಮು-ಕಾಶ್ಮೀರ, ಮೇಘಾಲಯದ ನಿವಾಸಿಗಳಿಗೆ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯವಲ್ಲ. 1961 ರ ಆದಾಯ ತೆರಿಗೆ ಇಲಾಖೆಯ ಪ್ರಕಾರ ಅನಿವಾಸಿ ಭಾರತೀಯ(ಎನ್‌ಆರ್ ಐ) ರಿಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಕಳೆದ ವರ್ಷದ ಅವಧಿಯಲ್ಲಿ 80 ವರ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ಅಂತಹ ವ್ಯಕ್ತಿಗಳ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯವಾಗಿರುವುದಿಲ್ಲ.
ಭಾರತದ ಪ್ರಜೆಯಲ್ಲದ ವ್ಯಕ್ತಿಗೆ ಪ್ಯಾನ್- ಆಧಾರ್ ಜೋಡಣೆ ಕಡ್ಡಾಯವಲ್ಲ. ಮಾ.31, 2022 ರಕ್ಕೂ ಮುನ್ನ ಆಧಾರ್-ಪ್ಯಾನ್ ಜೋಡಣೆ ಉಚಿತವಾಗಿತ್ತು. ಏ.1, 2022 ರಿಂದ 500 ರೂಪಾಯಿಗಳ ದಂಡ ವಿಧಿಸಲಾಗಿತ್ತು ಹಾಗೂ ಜುಲೈ, 1, 2022 ರಿಂದ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.