ದೇವಸ್ಥಾನಕ್ಕೆ ಹೋದ ಬಾಲಕನ ಮೇಲೆ ಸವರ್ಣಿಯನಿಂದ ಹಲ್ಲೆ | Doddaballapura |

ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದ ದೇವಸ್ಥಾನವೊಂದರಲ್ಲಿ ದಲಿತ ಬಾಲಕ ದೇವಸ್ಥಾನಕ್ಕೆ ಹೋದಾಗ, ಸರ್ವಣಿಯನೊಬ್ಬ ಬಾಲಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ಬಾಲಕನ ತಾಯಿಯ ಮೇಲೂ ಹಲ್ಲೆ ನಡೆಸಿದ ಘಟನೆ ಜರುಗಿದೆ. ರಾಮನಾಥಪುರ ಗ್ರಾಮದ ಮುನಿಆಂಜಿನಪ್ಪ ಕುಟುಂಬದ ಮೇಲೆ ಸರ್ವಣಿಯರರಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ಜರ್ಜರಿತರಾಗಿರುವ ಕುಟುಂಬ ಗ್ರಾಮದಲ್ಲಿ ನಮಗೆ ರಕ್ಷಣೆ ಬೇಕೆಂದು ಕಣ್ಣೀರು ಹಾಕುತ್ತಿದೆ, ದಲಿತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಕಿಶೋರ್, ಮಂಜುನಾಥ್, ವೆಂಕಟೇಗೌಡ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.