ಕೋಲಾರದ ವಿಸ್ಟ್ರಾನ್ ಖರೀದಿಗೆ ಮುಂದಾದ ಟಾಟಾ

ಆಪಲ್ ಕಂಪೆನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಕಂಪೆನಿಯನ್ನು ಖರೀದಿಸಲು ಟಾಟಾ ಸಮೂಹ ಉತ್ಸಾಹ ತೋರಿದೆ ಎನ್ನಲಾಗಿದೆ. ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಘಟಕದ ಖರೀದಿಗೆ ಟಾಟಾ ಸಮೂಹ ಆಸಕ್ತಿ ತೋರಿದೆ. 4,000-5,000 ಕೋಟಿ ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೋನ್ ತಯಾರಿಸುವ ದೇಶದ 3 ಘಟಕಗಳಲ್ಲಿ ಒಂದಾಗಿದೆ. ಟಾಟಾ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ.