'ಪಂಚರತ್ನ'ಯಾತ್ರೆಯಲ್ಲಿ H.D ಕುಮಾರಸ್ವಾಮಿ ಜೊತೆ 'ರೌಡಿ ಶೀಟರ್' ಪ್ರತ್ಯಕ್ಷ

'ಪಂಚರತ್ನ'ಯಾತ್ರೆಯಲ್ಲಿ H.D ಕುಮಾರಸ್ವಾಮಿ ಜೊತೆ 'ರೌಡಿ ಶೀಟರ್' ಪ್ರತ್ಯಕ್ಷ

ಬೆಂಗಳೂರು : ಜೆಡಿಎಸ್ ಪಂಚರತ್ನ ರಥ ಯಾತ್ರೆ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೊತೆ ರೌಡಿ ಶೀಟರ್ ಒಬ್ಬಾತ ಪ್ರತ್ಯಕ್ಷನಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.

ನ.30 ರಂದು ನಡೆದ ನೆಲಮಂಗಲ ಕ್ಷೇತ್ರದ ಪಂಚರತ್ನ ಯಾತ್ರೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ರೌಡಿ ಶೀಟರ್ ಗೊಬ್ಬರದ ರಂಗಸ್ವಾಮಿ ಕಾಣಿಸಿಕೊಂಡಿದ್ದನು.

ಹೆಚ್ಡಿಕೆ ಪಕ್ಕದಲ್ಲೇ ಈತ ಗುರುತಿಸಿಕೊಂಡಿದ್ದು, ಹಲವು ಟೀಕೆಗೆ ಕಾರಣವಾಗಿದೆ. ಈತ ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದನು.ಈ ವಿಚಾರ ರಾಜಕೀಯ ವಲಯದಲ್ಲಿ ಹಲವು ಟೀಕೆಗೆ ಕಾರಣವಾಗಿದೆ.

ಈಗಾಗಲೇ ರೌಡಿ ಶೀಟರ್ ಗಳು ರಾಜಕೀಯ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವ ವಿಚಾರ ಕೋಲಾಹಲಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಬಿಜೆಪಿ ನಾಯಕರುಗಳ ಜೊತೆ ರೌಡಿಶೀಟರ್ ವೇದಿಕೆ ಹಂಚಿಕೊಂಡಿದ್ದರು, ಇದು ವಿಪಕ್ಷಗಳ ಭಾರೀ ಟೀಕೆಗೆ ಕಾರಣವಾಗಿತ್ತು.