ಜೈಪುರದ ಎದುರು ಮುಗ್ಗರಿಸಿದ ಬುಲ್ಸ್

ಹೈದರಾಬಾದ್ ನಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್ ನ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ 45-25 ಅಂಕಗಳಿಂದ ಭರ್ಜರಿಯಾಗಿ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿದೆ. ಜೈಪುರ್ ಪರವಾಗಿ ರೈಡರ್ ಗಳಾದ ಅರ್ಜುನ್ ದೇಶ್ವಾಲ್ 13 ಅಂಕ ಮತ್ತು ವಿ.ಅಜಿತ್ 6 ಅಂಕ ಗಳಿಸಿ ಗಮನ ಸೆಳೆದರು. ಇತ್ತ ಬೆಂಗಳೂರು ತಂಡದ ರೈಡರ್ ಭರತ್ 10 ಅಂಕ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಗಮನಾರ್ಹ ಪ್ರದರ್ಶನ ಕಂಡು ಬರಲಿಲ್ಲ.