ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಬಿಗ್ ಶಾಕ್
ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಶೀಘ್ರವೇ ಬಿಸಿಯೂಟದಲ್ಲಿ ರಾಗಿಮುದ್ದೆ & ಜೋಳದ ರೊಟ್ಟಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ, ಈ ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಗ್ರಹವಾಗುತ್ತಿರುವ ಆಹಾರ ಧಾನ್ಯಗಳು ಚೆನ್ನಾಗಿಲ್ಲ. ಅವುಗಳ ಪೌಷ್ಟಿಕಾಂಶ ಕಳಪೆಯಾಗಿದೆ. ಹಾಗಾಗಿ ಮಕ್ಕಳಿಗೆ ಸದ್ಯಕ್ಕೆ ರಾಗಿಮುದ್ದೆ & ಜೋಳದ ರೊಟ್ಟಿ ಭಾಗ್ಯ ಇಲ್ಲ ಎಂದು ಬಿಸಿಯೂಟ ಊಟ ಯೋಜನೆಯ ಮುಖ್ಯ ಅಧಿಕಾರಿ ಅನಿತಾ ನಜರೆ ಹೇಳಿದ್ದಾರೆ.