ಬೆಂಗಳೂರಿನ ಮೂವರು ಪೊಲೀಸರ ಮೇಲೆ ಎಫ್ಐಆರ್ ದಾಖಲಿಸಿದ ದೆಹಲಿ ಪೊಲೀಸರು; ಏನಿದು ಪ್ರಕರಣ?

ಬೆಂಗಳೂರು: ಉದ್ಯಮಿಯಿಂದ ಹಣ ವಸೂಲಿ ಮಾಡಿದ ಆರೋಪದಡಿ ಬೆಂಗಳೂರಿನ ಮೂವರು ಪೊಲೀಸರ ವಿರುದ್ಧ ದೆಹಲಿಯ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ನೊಟೀಸ್ ಕೊಡಲು ಬೆಂಗಳೂರಿನ ಮೂವರು ಪೊಲೀಸರು ದೆಹಲಿಗೆ ತೆರಳಿದ್ದರು.
ಉದ್ಯಮಿಯಿಂದ ಹಣ ವಸೂಲಿ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ.