ಬೈಕಿಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಬೈಕಿಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಭಾನುವಾರದಂದು ಶಿವಮೊಗ್ಗ ನಗರದ ಎನ್‌.ಟಿ. ರಸ್ತೆಯ ಗಜಾನನ ಗ್ಯಾರೇಜ್ ಬಳಿ ಸುಜುಕಿ ರಿಟ್ಜ್ ಕಾರು 2 ಬೈಕಿಗೆ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇನ್ನೊಂದು ಬೈಕ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವ್ಯಕ್ತಿಯನ್ನು ಇಂಡಸ್ಟಿçಯಲ್ ಏರಿಯಾದಲ್ಲಿ ಕಾರ್ಮಿಕನಾಗಿದ್ದ ಅಗಸನವಳ್ಳಿ ನಿವಾಸಿ ಹರೀಶ್ (19) ಎಂದು ಗುರುತಿಸಲಾಗಿದೆ.

ಇನ್ನೊಂದು ಬೈಕ್‌ನಲ್ಲಿದ್ದ ಗುಣಶೇಖರ್ ಮತ್ತು ದೀಪಕ್ ಎಂಬ ಯುವಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಸಂಚಾರಿ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದೆ.