ಕೊರೊನಾ ಎರಡು ಡೋಸ್ ಲಸಿಕೆ ಪೂರ್ತಿ ಗೊಂಡವರ ಮನೆಗಳಿಗೆ ಸ್ಟಿಕ್ಕರ್ ಹಾಕಬೇಕು-ಮನಸುಖ ಮಾಂಡವಿಯ

ಹೊಸದಿಲ್ಲಿ: ಕೊರೊನಾ ಎರಡು ಡೋಸ್ ಲಸಿಕೆ ಪಡೆದುಕೊಂಡವರ ಮನೆಗಳಿಗೆ ಸ್ಟಿಕ್ಕರ್ ಹಾಕಬೇಕು. ಈ ಮೂಲಕ ಯಾವೆಲ್ಲ ಮನೆಗಳವರು ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯ ಹೇಳಿದ್ದಾರೆ.
ನಾಗರಿಕ ಸಂಘಟನೆಗಳು, ಎನ್‌ಜಿಒಗಳ ಪದಾಧಿಕಾರಿಗಳ ಸಭೆಯಲ್ಲಿ ಮಾಂಡವಿಯ ಈ ಪ್ರಸ್ತಾವ ಮಾಡಿದ್ದಾರೆ.ಲಾಕ್‌ಡೌನ್ ವೇಳೆ ಎನ್‌ಜಿಒಗಳು, ನಾಗರಿಕ ಸಂಘಟನೆಗಳು ಕೇಂದ್ರ ಸರಕಾರದ ಜತೆಗೆ ಸಹಕಾರ ನೀಡಿ ಹಸಿದವರಿಗೆ ಆಹಾರ ನೀಡುವಲ್ಲಿ ಶ್ರಮಿಸಿವೆ.ಶೇ. 80ರಷ್ಟು ಮಂದಿ ಮೊದಲ ಡೋಸ್, ಶೇ. 40 ಮಂದಿ ಎರಡೂ ಡೋಸ್ ಲಸಿಕೆ ಪಡೆಯುವಲ್ಲಿ ಎನ್‌ಜಿಒ ಸಹಕಾರ ಮಹತ್ವದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.