ಕಾಂಗ್ರೆಸ್ ಹೊರತುಪಡಿಸಿದ ತೃತಿಯ ರಂಗ ಅಸಾಧ್ಯ : ರಾವತ್

ಮುಂಬೈ,ಜೂ.26-ಕಾಂಗ್ರೆಸ್ ಹೊರತುಪಡಿಸಿ ತೃತಿಯ ರಂಗ ರಚನೆ ಅಸಾಧ್ಯ ಎಂದು ಶಿವಸೇನೆ ಮುಖಂಡ ಸಂಜಯ್‍ರಾವತ್ ಹೊಸ ಬಾಂಬ್ ಸಿಡಿಸಿದ್ದಾರೆ. ಪ್ರಸ್ತುತ ಎನ್‍ಡಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ರಚನೆ ಮಾಡಲು ತೀರ್ಮಾನಿಸಲಾಗಿರುವ ತೃತಿಯ ರಂಗದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇತ್ತಿಚೆಗೆ ಎನ್‍ಸಿಪಿ ಮುಖಂಡ ಶರದ್‍ಪವಾರ್ ಅವರ ನಿವಾಸದಲ್ಲಿರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹೊರತುಪಡಿಸಿ ಟಿಎಂಸಿ, ಎಸ್‍ಪಿ, ಎಎಪಿ, ಆರ್‍ಎಲ್‍ಡಿ, ಎಡಪಕ್ಷಗಳು ಸೇರಿದಂತೆ ದೇಶದ ಪ್ರಮುಖ ಎಂಟು ಪಕ್ಷಗಳ ಮುಖಂಡರು ಸಭೆ ನಡೆಸಿ ತೃತಿಯ ರಂಗ ರಚನೆ ಬಗ್ಗೆ ಮಾತುಕತೆ ನಡೆಸಿರುವ ಬೆನ್ನಲ್ಲೇ ರಾವತ್ ಈ ಹೇಳಿಕೆ ನೀಡಿದ್ದಾರೆ.
ಸಧ್ಯ ಯಾವ ತೃತಿಯ ರಂಗದ ಅವಶ್ಯಕತೆಯೂ ಇಲ್ಲ. ಈ ಕುರಿತಂತೆ ಶರದ್ ಪವಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ತೃತಿಯ ರಂಗ ರಚಿಸುವುದಾದರೆ ಕಾಂಗ್ರೆಸ್ ಒಳಗೊಂಡ ಕೂಟ ರಚನೆಯಾಗಬೇಕು ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.