ಮಹಾರಾಷ್ಟ್ರ ಪುಂಡರಿಗೆ ಎಚ್ಚರಿಕೆ ಕೊಟ್ಟ ನಟ ದರ್ಶನ್!

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ. ಹೀಗಾಗಿ ಮಹಾರಾಷ್ಟ್ರ ಪುಂಡರಿಗೆ ನಟ ದರ್ಶನ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, 'ಬೆಳಗಾವಿ ನಮ್ಮದು, ಇಲ್ಲಿ ಕನ್ನಡ ಧ್ವಜ ಹಾರಿಸುವುದು, ಈ ಮಣ್ಣಿನ ನೆಲದ ಮೌಲ್ಯಗಳಿಗೆ ಬೆಲೆಕೊಡುವ ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆಗೆ ಹಿಡಿದ ಕನ್ನಡಿ. ಇದನ್ನು ಬಲಹೀನತೆ ಎಂದು ಭಾವಿಸಿದರೆ ಕನ್ನಡಿಗರು ತಿರುಗಿ ಬಿದ್ದು ಸರಿಯಾದ ಉತ್ತರ ನೀಡಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.