ಸ್ನಾನ ಮಾಡಿಲ್ಲ, ಕಪ್ಪಾಗಿ ವಿಚಿತ್ರವಾಗಿದ್ದೀಯ : ಮಹಿಳೆ ಮೇಲೆ ದೇವಸ್ಥಾನದಲ್ಲಿ ಹಲ್ಲೆ

ಸ್ನಾನ ಮಾಡಿಲ್ಲ, ಕಪ್ಪಾಗಿ ವಿಚಿತ್ರವಾಗಿದ್ದೀಯ : ಮಹಿಳೆ ಮೇಲೆ ದೇವಸ್ಥಾನದಲ್ಲಿ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ದೇವಾಲಯಕ್ಕೆ ಬಂದಿದ್ದ ಮಹಿಳೆ ಮೇಲೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣಪ್ಪ ಎನ್ನುವವರು ಹಲ್ಲೆ ಮಾಡಿದ್ದಾರೆ.

ಸ್ನಾನಮಾಡಿ ಬಂದಿಲ್ಲ, ಶುಚಿಯಾಗಿಲ್ಲ, ನೋಡಲು ಕಪ್ಪಾಗಿದ್ದೀಯ, ನಿನ್ನ ಮುಖ ವಿಚಿತ್ರವಾಗಿದೆ ಎಂದೆಲ್ಲಾ ನಿಂದಿಸಿ ಮಹಿಳೆಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯಗಳು ರೆಕಾರ್ಡ್ ಆಗಿದ್ದು, ಮಹಿಳೆ ಸಹಾಯಕ್ಕೆ ಬಂದವರ ಮೇಲೂ ಮುನಿಕೃಷ್ಣಪ್ಪ ಹಲ್ಲೆ ಮಾಡಲು ಹೋಗಿರುವುದು ಕಾಣಿಸಿದೆ. ಮನಬಂದಂಥೆ ಥಳಿಸಿ, ಕೂದಲು ಹಿಡಿದು ಎಳೆದು ದೇವಾಲಯದಿಂದ ಹೊರಹಾಕಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.

ಈ ವಿಷಯ ಯಾರಿಗೂ ಹೇಳದೇ ಸುಮ್ಮನಿದ್ದರೆ ಸರಿ ಇಲ್ಲವಾದರೆ ನಿನ್ನ ಹಾಗೂ ನಿನ್ನ ಗಂಡನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದಿದ್ದಾಳೆ.

ಇದಕ್ಕೆ ಮುನಿಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದು, ಆ ಮಹಿಳೆ ನನ್ನ ಮೇಲೆ ದೇವರು ಬಂದಿದೆ, ನಾನು ವೆಂಕಟೇಶ್ವರ ದೇವರ ಪತ್ನಿ, ದೇವರ ಪಕ್ಕ ಕೂರಲು ಬಿಡಿ ಎಂದು ಜಗಳ ಮಾಡಿದ್ದಾಳೆ. ಆಕೆಯನ್ನು ನಿಲ್ಲಿಸಿದ್ದಕ್ಕೆ ಅರ್ಚಕರ ಮುಖಕ್ಕೆ ಉಗಿದಿದ್ದಾಳೆ ಎಂದು ಹೇಳಿದ್ದಾರೆ.