ಬೆಂಗಳೂರಿನಲ್ಲಿ ಫೆ. 13ಕ್ಕೆ ಪ್ರಧಾನಿ ಮೋದಿಯಿಂದ 'ಏರ್ ಶೋ' ಉದ್ಘಾಟನೆ |Air Show 2023

ಬೆಂಗಳೂರಿನಲ್ಲಿ ಫೆ. 13ಕ್ಕೆ ಪ್ರಧಾನಿ ಮೋದಿಯಿಂದ 'ಏರ್ ಶೋ' ಉದ್ಘಾಟನೆ |Air Show 2023

ಬೆಂಗಳೂರು: ಬೆಂಗಳೂರಿನಲ್ಲಿ ಇದೇ ಫೆಬ್ರವರಿ 13 ರಿಂದ ಫೆಬ್ರವರಿ 17ರ ವರೆಗೆ ಅಂತಾರಾಷ್ಟ್ರೀಯ ಮಟ್ಟದ 'ಏರೋ ಇಂಡಿಯಾ-2023' ಪ್ರದರ್ಶನ ನಡೆಯಲಿದೆ.

ಬೆಂಗಳೂರಿನ ಯಲಹಂಕ ವಲಯದ ವಾಯು ನೆಲೆಯಲ್ಲಿ ಏರ್ ಶೋ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಐದು ದಿನಗಳ ಏರೋ ಇಂಡಿಯಾ 2023 ಪ್ರದರ್ಶನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 2023ರ ಆವೃತ್ತಿಯಲ್ಲಿ ಪ್ರಪಂಚದಾದ್ಯಂತ 731 ಪ್ರದರ್ಶಕರು ಭಾಗವಹಿಸುತ್ತಾರೆ ಎಂದು ಸಚಿವಾಲಯ ತಿಳಿಸಿದೆ.

ಇನ್ನೂ, ಸಾರ್ವಜನಿಕರಿಗೂ ಏರ್ ಶೋ ಕಣ್ತುಂಬಿಕೊಳ್ಳಲು ಅವಕಾಶವಿದ್ದು. ಬ್ಯುಸಿನೆಸ್ ಟಿಕೆಟ್ ಗೆ 5,000 ರೂ ಶುಲ್ಕ ನಿಗದಿಪಡಿಸಲಾಗಿದೆ. ವಿದೇಶೀಯರಿಗೆ 150 ಡಾಲರ್ ಶುಲ್ಕವಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡಲು ಅವಕಾಶ ಕಲ್ಪಿಸುವ ಟಿಕೆಟ್ ಗೆ 2,500 ರೂ ಶುಲ್ಕವಿದ್ದು, ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ್ದ ಸಿಎಂ ಬೊಮ್ಮಾಯಿ ಈ ಏರ್ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಬಗ್ಗೆ ಬೆಳಕು ಚೆಲ್ಲಬೇಕು. ಏರ್ ಶೋ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ ಎಂದಿದ್ದರು.