ಭಾರತ ಈಗ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆ

ಜಪಾನ್ ನನ್ನು ಹಿಂದಿಕ್ಕಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಈ ಬಗ್ಗೆ ನಿಕ್ಕಿ ಏಷ್ಯಾ ವರದಿ ಮಾಡಿದೆ. ಭಾರತದ ಹೊಸ ವಾಹನಗಳ ಮಾರಾಟವು ಕನಿಷ್ಠ 4.25 ಮಿಲಿಯನ್ ಯುನಿಟ್‌ಗಳಾಗಿದ್ದು, ಪ್ರಾಥಮಿಕ ಫಲಿತಾಂಶಗಳ ಆಧಾರದ ಮೇಲೆ ಜಪಾನ್‌ನಲ್ಲಿ 4.2 ಮಿಲಿಯನ್ ಯುನಿಟ್ ಮಾರಟವಾಗಿದೆ. ಹೀಗಾಗಿ ಜಪಾನ್ ದೇಶವನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.