ಬಾಲಿವುಡ್ ಹಿರಿಯ ನಟ ಜಾವೇದ್ ಖಾನ್ ನಿಧನ

ಬಾಲಿವುಡ್ ಹಿರಿಯ ನಟ ಜಾವೇದ್ ಖಾನ್ ನಿಧನ

ಲವಾರು ಜನಪ್ರಿಯ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಹಿರಿಯ ನಟ ಜಾವೇದ್ ಖಾನ್ ಫೆಬ್ರವರಿ 14ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಲಖಾನ್, ಅಂದಾಜ್ ಅಪ್ನಾ ಅಪ್ನಾ, ಚಕ್ ದೇ ಇಂಡಿಯಾ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.

ಗಂಟಲು ಸಮಸ್ಯೆಯಿಂದ ಬಳುತ್ತಿದ್ದ ಅವರು ಕೆಲವು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಅಂತ್ಯ ಸಂಸ್ಕಾರ ಮಂಗಳವಾರವೇ ನಡೆಯಿತು.

ಹಲವಾರು ಸ್ಟಾರ್ ನಟರ ಜೊತೆ ನಟಿಸಿದ್ದ ಜಾವೇದ್ ಖಾನ್ ಅಮ್ರೊಹಿ ಅವರ ನಿಧನದ ಸುದ್ದಿಯನ್ನು ನಿರ್ದೇಶಕ ಅಖಿಲೇಂದ್ರ ಮಿಶ್ರಾ ದೃಢಪಡಿಸಿದ್ದು, ನಟರ ಸಂಘಟನೆಯ ವಾಟ್ಸಪ್ ಗ್ರೂಪ್ ನಲ್ಲಿ ಈ ಸುದ್ದಿ ಬಂದಿದೆ ಎಂದು ತಿಳಿಸಿದ್ದಾರೆ.