ಟ್ವೀಟ್ ಮೂಲಕ 'ಕನಕದಾಸ ಜಯಂತಿ' ಶುಭಾಶಯ ಕೋರಿದ ಕಾಂಗ್ರೆಸ್

ಟ್ವೀಟ್ ಮೂಲಕ 'ಕನಕದಾಸ ಜಯಂತಿ' ಶುಭಾಶಯ ಕೋರಿದ ಕಾಂಗ್ರೆಸ್

ಬೆಂಗಳೂರು : ರಾಜ್ಯದೆಲ್ಲೆಡೆ ಇಂದು ಕನಕದಾಸ ಜಯಂತಿಯ ಸಂಭ್ರಮ, ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಶುಭಾಶಯ ಕೋರಿದೆ.

ಕೀರ್ತನಕಾರರಾಗಿ, ಸಂತರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿದ, ನಳಚರಿತ್ರೆ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿಯಂತಹ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ, ದಾಸ ಶ್ರೇಷ್ಠರಾದ 'ಕನಕ ದಾಸ' ಜಯಂತಿಯ ಶುಭಾಶಯಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.