ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಯನ್ನು ಲೂಟಿ ರವಿ ಎಂದು ಹೇಳುತ್ತಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಾಗ್ದಾಳಿ

ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಯನ್ನು ಲೂಟಿ ರವಿ ಎಂದು ಹೇಳುತ್ತಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಾಗ್ದಾಳಿ
ಚಿಕ್ಕಮಗಳೂರು ಕ್ಷೇತ್ರ ಮೂಲಸೌಕರ್ಯಗಳಿಂದಲೂ ವಂಚಿತವಾಗಿದೆ. ಧರ್ಮ, ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡುವುದೇ ರವಿ ಕಾಯಕ. ಸಿ.ಟಿ.ರವಿ ಒಬ್ಬ ವಿಕೃತ ಮನಸ್ಸುಳ್ಳಂತಹ ವ್ಯಕ್ತಿ ಎಂದು ಆರ್. ಧ್ರುವನಾರಾಯಣ ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಿ.ಟಿ. ರವಿಯನ್ನು ಲೂಟಿ ರವಿ ಎಂದು ಹೇಳುತ್ತಾರೆ. ಅವರು 4 ಬಾರಿ ಶಾಸಕ, 2 ಬಾರಿ ಸಚಿವರಾಗಿದ್ದರೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಬುಧವಾರ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರ ಮೂಲಸೌಕರ್ಯಗಳಿಂದಲೂ ವಂಚಿತವಾಗಿದೆ. ಧರ್ಮ, ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡುವುದೇ ರವಿ ಕಾಯಕ. ಸಿ.ಟಿ.ರವಿ ಒಬ್ಬ ವಿಕೃತ ಮನಸ್ಸುಳ್ಳಂತಹ ವ್ಯಕ್ತಿ ಎಂದು ಆರ್. ಧ್ರುವನಾರಾಯಣ ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬೆಂಕಿ ಹಚ್ಚುವ ಮನಸ್ಥಿತಿಯ ಪಕ್ಷವೆಂದು ಸಿ.ಟಿ ರವಿ ಆರೋಪಿಸಿದ್ದಾರೆ. ನಿಮಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಬಿಜೆಪಿ ಅಂದ್ರೆ ಬೆಂಕಿ ಹಚ್ಚುವ ಜನರ ಪಕ್ಷವೆಂದು ಹೇಳಬೇಕಾಗುತ್ತೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ 4 ತಿಂಗಳೊಳಗೆ 43 ಕೇಸ್​ ಹಿಂಪಡೆದಿದ್ದರು. 43 ಕೇಸ್​ಗಳ ಪೈಕಿ ಮೊದಲ ಪ್ರಕರಣವೇ ಸಿ.ಟಿ. ರವಿ ಅವರದು. ಬಿಜೆಪಿ ಶಾಸಕರ ಬೆಂಕಿ, ದೌರ್ಜನ್ಯ ಪ್ರಕರಣಗಳನ್ನು ಹಿಂಪಡೆದಿದ್ದರು. ಇದರಲ್ಲೇ ಗೊತ್ತಾಗುತ್ತೆ ಯಾರು ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಯಾರು, ಯಾವ ಕೇಸ್​ ಹಿಂಪಡೆದರು ಎಂದು ಜನರಿಗೆ ಗೊತ್ತಿದೆ ಎಂದು ಧ್ರುವ ನಾರಾಯಣ್ ಟೀಕಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ 2 ವರ್ಷ ಜೈಲಿನಲ್ಲಿದ್ದರು. ನಮ್ಮ ರಾಜ್ಯದಲ್ಲಿ ಸಿಎಂ, ಸಚಿವರಾಗಿದ್ದವರು ಜೈಲುಪಾಲಾಗಿದ್ದರು. ನಿಮ್ಮ ಮನೆಯ ವಾತಾವರಣವೇ ಕೊಳೆತು ನಾರುತ್ತಿದೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್​ ಬಗ್ಗೆ ನಿಮಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿಕೆ ನೀಡಿದ್ದಾರೆ.