ಓವರ್ ಟೇಕ್ ಮಾಡೋದಕ್ಕೆ ಹೋಗಿ ಶಾಲಾ ಬಸ್ ಕರೆಂಟ್ ಕಂಬಕ್ಕೆ ಡಿಕ್ಕಿ: ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ: ಮುಂದೆ ಸಾಗುತ್ತಿದ್ದಂತ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ, ನಿಯಂತ್ರಣ ತಪ್ಪಿ, ಶಾಲಾ ಬಸ್ ಒಂದು ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಾಲಾ ಬಸ್ ನಲ್ಲಿದ್ದಂತ 20ಕ್ಕೂ ಹೆಚ್ಚು ಮಕ್ಕಳು ಅದೃಷ್ಠ ವಶಾತ್ ಯಾವುದೇ ಅನಾಹುತವಾಗದೇ ಪಾರಾಗಿರೋ ಘಟನೆ, ಬಾಗಲಕೋಟೆಯ ಬನಹಟ್ಟಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗೀ ಶಾಲಾ ಬಸ್ ಒಂದು, ಕಬ್ಬು ಹೇರಿಕೊಂಡು ಸಾಗುತ್ತಿದ್ದಂತ ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ, ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ, ಬಸ್ ವಾಲಿ ಕಂಬದ ಬಳಿಯಲ್ಲಿಯೇ ನಿಂತಿದೆ.
ಘಟನಾ ಸ್ಥಳದಲ್ಲಿದ್ದಂತ ಸ್ಥಳೀಯರು ಕೂಡಲೇ ಮಕ್ಕಳನ್ನು ಶಾಲಾ ಬಸ್ ನಿಂದ ಇಳಿಸಿ, ರಕ್ಷಿಸಿದ್ದಾರೆ. ಹೀಗಾಗಿ ಕರೆಂಟ್ ಕಂಬಕ್ಕೆ ಬಸ್ ಗುದ್ದಿದ ನಂತ್ರವೂ ಅದೃಷ್ಠ ವಶಾತ್ 20ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.