ಗೋಕರ್ಣ:ಸಮುದ್ರದ ಅಲೆಗೆ ಸಿಲುಕಿ ವೈದ್ಯಕೀಯ ವಿದ್ಯಾರ್ಥಿ ಸಾವು

ಗೋಕರ್ಣ:ಸಮುದ್ರದ ಅಲೆಗೆ ಸಿಲುಕಿ ವೈದ್ಯಕೀಯ ವಿದ್ಯಾರ್ಥಿ ಸಾವು

ಗೋಕರ್ಣ:ಸಮುದ್ರದ ಅಲೆಗೆ ಸಿಲುಕಿ ವೈದ್ಯಕೀಯ ವಿದ್ಯಾರ್ಥಿ ಸಾವು
 
ಕಾರವಾರ: ಸಮುದ್ರದಲ್ಲಿ ಈಜಲು ಹೋದ ಯುವಕನೊಬ್ಬ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇಂದು (ಮಂಗಳವಾರ) ನಡೆದ ವರದಿಯಾಗಿದೆ.
ಮೃತಪಟ್ಟವನನ್ನು ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಮಿಕ್ರಮ ಎಂದು ಗುರುತಿಸಲಾಗಿದೆ. ಆರು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬೆಂಗಳೂರಿನಿAದ ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಕುಡ್ಲೆ ಕಡಲತೀರದಲ್ಲಿ ಈಜುವಾಗ ಸಮುದ್ರದ ಅಲೆಗೆ ಸಿಕ್ಕು ವಿಕ್ರಂ ಮೃತಪಟ್ಟಿದ್ದಾನೆ.
ಶವವನ್ನು ಗೋಕರ್ಣದ ಪ್ರಾಥ್ರಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕರ್ಣ ಕಡಲತೀರ ಪ್ರವಾಸಿಗರಿಗೆ ಅಪಾಯವಾಗುತ್ತಿದೆ. ಮತ್ತು ಈ ವರ್ಷ ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಸಮುದ್ರಕ್ಕೆ ಇಳಿಯುವವರು ಅಲೆಗಳ ರಭಸಕ್ಕೆ ಸಿಲುಕಿ ಸಅವಿಗೀಡಾಗುತ್ತಿದ್ದಾರೆ. ಕೆಲವೊಮ್ಮೆ ಸ್ಥಳೀಯರು ಎಚ್ಚರಿಸಿದರೂ ಲೆಕ್ಕಿಸದೆ ಸುಮದ್ರಕ್ಕೆ ಇಳಿಯುತ್ತಾರೆ.
ಕಡಲ ತೀರದಲ್ಲಿ ಲೈಫ್ ಗಾರ್ಡ್ , ಪ್ರವಾಸಿ ಮಿತ್ರ ಹಾಗೂ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ. ಹೀಗಿದ್ದರೂ ಎಚ್ಚರಿಕೆ ನೀಡಿದರೂ ಸಮುದ್ರದಲ್ಲಿ ಈಜಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತಿದ್ದಾರೆ.