ಹೇ. ಸಿ.ಟಿ ರವಿ ಅಲ್ಲ.. ಅವ ಲೂಟಿ ರವಿ: ನಮ್ಮ ಮೇಲೆ ಆರೋಪ ಮಾಡಿದ ತಕ್ಷಣ ದೊಡ್ಡ ಲೀಡರ್ ಆಗೋದಿಲ್ಲ - ಡಿ.ಕೆ.ಶಿವಕುಮಾರ್

ಬೆಳಗಾವಿ: ಸಿ.ಟಿ.ರವಿಯಲ್ಲ ಆತ ಲೂಟಿ ರವಿ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೇ ಅವರ ಮತ್ತೊಂದು ಮುಖವಾಡ ಚಿಕ್ಕಮಗಳೂರಿನಲ್ಲಿ ಹೊರ ಬೀಳ್ತಾ ಇತ್ತು. ನಮ್ಮ ಮೇಲೆ ಆರೋಪ ಮಾಡಿದ ತಕ್ಷಣ ದೊಡ್ಡ ಲೀಡರ್ ಆಗೋಲಿದ್ದ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತಾ, ಬೆಳಗಾವಿಯ ಸುವರ್ಣ ಸೌಧಕ್ಕೆ ಆಗಮಿಸಿದ್ದಂತ ಕಾಂಗ್ರೆಸ್ ಮುಖಂಡರನ್ನು, ಪೊಲೀಸರು ಗೇಟ್ ಬಳಿಯಲ್ಲಿಯೇ ತಡೆದು ನಿಲ್ಲಿಸಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧದ ಒಳಗೆ ಪ್ರವೇಶಿಸೋದಕ್ಕೆ ಅನುಮತಿ ನೀಡಿದ್ದಾರೆ. ಹೀಗಾಗಿ ಸುವರ್ಣ ಸೌಧದವನ್ನು ಟ್ರ್ಯಾಕ್ಟರ್ ಮೂಲಕವೇ ಕಾಂಗ್ರೆಸ್ ನಾಯಕರು ಪ್ರವೇಶಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದ ಗೇಟ್ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಿದ್ಧರಾಮಯ್ಯಗೆ ಕರೆ ಮಾಡದಂತ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು, ಸುವರ್ಣ ಸೌಧ ಪ್ರವೇಶಿಸಲು ಅನುಮತಿ ಕೊಡೋದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ನೋಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆಯವರೇ ಪೋಲೀಸರು ನಮ್ಮನ್ನು ತಡೆಯುತ್ತಿದ್ದಾರೆ. ಒಂದು ವೇಳೆ ಒಳಗೆ ಬಿಡದೇ ಇದ್ದರೇ ಗೇಟ್ ಹೊಡೆದುಕೊಂಡು ಬರೋದಾಗಿ ತಿಳಿಸುತ್ತಾರೆ.
ಈ ಸಂದರ್ಭದಲ್ಲಿ ಸಿದ್ಧರಾಮಯ್ಯಗೆ ತಾವು ಬಿಡಿಸೋದಾಗಿ ಹೇಳುತ್ತಾರೆ. ಪೋನ್ ಕರೆ ಕಟ್ ಆದ ಬಳಿಕ ಸಿದ್ಧರಾಮಯ್ಯ, ಇದು ಪೊಲೀಸರ ವ್ಯಾಪ್ತಿಯಲ್ಲಿ ಬರೋ ಸೌಧವಲ್ಲ. ಸ್ಪೀಕರ್ ಅಡಿ ಬರೋದಾಗಿದೆ. ಈಗ ಸ್ಪೀಕರ್ ಕರೆ ಮಾಡಿದ್ದರು. ಬಿಡಿಸುವುದಾಗಿ ತಿಳಿಸಿದ್ದಾರೆ. ಕಾದು ನೋಡುತ್ತೇವೆ. ಒಳ ಬಿಡದೇ ಇದ್ದರೇ ಇಲ್ಲಿಯೇ ಪ್ರತಿಭಟನೆ ನಡೆಸೋದಾಗಿ ತಿಳಿಸಿದರು.
ಸುವರ್ಣ ಸೌಧ ಒಳ ಪ್ರವೇಶಕ್ಕೆ ಪೊಲೀಸರು ಎಂಟ್ರಿ ನೀಡದ ಸಂದರ್ಭದಲ್ಲಿ, ಸುವರ್ಣ ಸೌಧ ಗೇಟ್ ಮುಂದೆ ಮಾತನಾಡಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸರ್ಕಾರ ಕಾರ್ ಗೆ ಲೈಸೆನ್ಸ್ ಕೊಟ್ಟಿದೆ. ವಾಹನ ಓಡಿಸೋದಕ್ಕೆ ಡಿಎಲ್ ಕೊಟ್ಟಿದೆ. ನಾವು ವಿಧಾನಸೌಧದದ ಒಳಗೆ ಹೋಗೋದಕ್ಕೆ ಬಿಡೋದಿಲ್ಲ ಎನ್ನೋದಕ್ಕೆ ಇವರಾರು.? ನಮಗೆ ಒಳಗೆ ಹೋಗೋದಕ್ಕೆ ಜನರೇ ಪಾಸ್ ಕೊಟ್ಟಿರುವಾಗ, ಅವನ್ ಯಾರ್ರಿ ನಮ್ಮನ್ನು ಪಾಸ್ ಕೇಳೋದಕ್ಕೆ ಎಂಬುದಾಗಿ ಬೆಳಗಾವಿ ಎಸ್ಪಿ ವಿರುದ್ಧ ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ನಾವು ಜನರಿಂದ ಆಯ್ಕೆಯಾಗಿದ್ದೇವೆ. ರಾಜ್ಯದ ನಾನಾ ಸಮಸ್ಯೆಗಳ ವಿರುದ್ಧ ಸದನದಲ್ಲಿ ಚರ್ಚೆ ನಡೆಸೋದಕ್ಕೆ ಹೋಗ್ತಾ ಇದ್ದೇವೆ. ಆದ್ರೇ ನೋಡಿ ಇವರು ನಮ್ಮನ್ನು ಒಳಗೆ ಹೋಗೋದಕ್ಕೆ ಬಿಡ್ತಾ ಇಲ್ಲ. ನಾವ್ ಬಿಡ್ತೀವಾ.. ನೋಡಿ ಅವರೊಂದು ಸುವರ್ಣ ಸೌಧದ ಗೇಟ್ ಗೆ ಬೀಗ ಹಾಕಿದ್ದಾರೆ. ನಾವೊಂದು ಬೀಗ ಹಾಕಿ ಗೇಟ್ ಬಂದ್ ಮಾಡಿದ್ದೇವೆ ಅಂದ್ರು.
ಮುಂದುವರೆದು ಮಾತನಾಡಿದಂತ ಅವರು, ರಾಜ್ಯ ಸರ್ಕಾರ ನಮ್ಮನ್ನು ಒಳಗೆ ಹೋಗೋದನ್ನು ತಡೆಯೋ ಕೆಲಸ ಮಾಡುತ್ತಿದೆ. ನಮ್ಮ ಹಕ್ಕು.. ನಾವು ಜನಪ್ರತಿನಿಧಿಗಳು, ನಮ್ಮನ್ನು ಇವರು ತಡೆಯೋದಕ್ಕೆ ಆಗೋದಿಲ್ಲ. ಒಂದು ವೇಳೆ ಒಳಗೆ ಬಿಡದಿದ್ರೇ.. ನಾವ್ ಬೀಡ್ತೀವಾ.. ಇಲ್ಲೇ ಮಲಗಿ ಪ್ರತಿಭಟನೆ ನಡೆಸುತ್ತೇವೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ಬಳಿಕ ಸುವರ್ಣ ಸೌಧದ ಒಳಗೆ ಟ್ರ್ಯಾಕ್ಟರ್ ಮೂಲಕವೇ ಒಳ ಪ್ರವೇಶಿಸಿದಂತ ಕಾಂಗ್ರೆಸ್ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಸಿಟಿ ರವಿ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಾಗಿ ಪ್ರತಿಭಟನೆ ನಡೆಸಿದಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹೇ.. ಸಿ.ಟಿ.ರವಿ ಅಲ್ಲ, ಆತ ಲೂಟಿ ರವಿ. ಅವರ ಬಗ್ಗೆ ನಮಗಿಂತ ಚಿಕ್ಕಮಗಳೂರಿನಲ್ಲಿ ಕೇಳಿ. ಅವರಿಗೆ ಗೊತ್ತು. ಸ್ವಲ್ಪ ಎಚ್ಚುಕಮ್ಮಿಯಾಗಿದ್ರೇ.. ಅವರ ಮತ್ತೊಂದು ಮುಖ ಗೊತ್ತಾಗ್ತಾ ಇತ್ತು ಎಂಬುದಾಗಿ ಕಿಡಿಕಾರಿದರು.