ಪ್ರಿಯಾಂಕ್ ಖರ್ಗೆಗೆ ಶೂಟ್ ಮಾಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್

ಕಲಬುರಗಿ : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯನ್ನ ಶೂಟ್ ಮಾಡುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠ ರಾಠೋಡ್ ನೀವು ಶೂಟ್ ಮಾಡಿ ನಾವು ಸಾಯೋಕು ರೆಡಿ ಇದ್ದೀವಿ. ನಾವೂ ನಿಮಗೆ ಶೂಟ್ ಮಾಡೋಕೂ ರೆಡಿ ಇದ್ದೀವಿ ಎಂದು ಹೇಳಿಕೆ ನೀಡಿದ್ದರು. ಮಣಿಕಂಠ ರಾಠೋಡ್ ಹೇಳಿಕೆ ಹಿನ್ನಲೆಯಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಣಿಕಂಠ ಬಂಧನಕ್ಕಾಗಿ ಕಾಂಗ್ರೆಸ್ (Congress) ಕೂಡ ಆಗ್ರಹಿಸಿತ್ತು. ಕಲಬುರಗಿ ಎಸ್ ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಭಾನುವಾರ ಮಧ್ಯರಾತ್ರಿ ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿ ಕಲಬುರಗಿಗೆ ಕರೆ ತಂದಿದ್ದಾರೆ.