ರೈತರ ಹಿತ ಕಾಪಾಡಿದ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ...
ಶಿಗ್ಗಾಂವಿ: ಮಳೆಗಾಲದ ಅತಿವೃಷ್ಟಿಯಿಂದಾಗಿ ನಗರದ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರು ಪ್ರಕೃತಿ ವಿಕೋಪ ತಂಡದ ಮಾರ್ಗದರ್ಶನದೊಂದಿಗೆ ಕಾರ್ಯಪ್ರವೃತ್ತರಾಗಿದ್ದು ಚರಂಡಿಯ ಹೂಳೆತ್ತುವ ಕೆಲಸ ಹಾಗೂ ರಸ್ತೆಯ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದು ನಾಗನೂರ ಕೇರೆಯ ನೀರು ರೈತರ ಹೊಲದಲ್ಲಿ ಹೋಗದಂತೆ ಒಡ್ಡನ್ನು ಹಾಕಿಸಲಾಗಿದೆ. ಪುರಸಭೆಯ ಅಧಿಕಾರಿಗಳ ಚುರುಕಿನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೀಯ ಮಾತುಗಳನ್ನಾಡಿದ್ದಾರೆ.