ಯೇತಿ ವಿಮಾನ ಅಪಘಾತದಲ್ಲಿ ಐವರು ಭಾರತೀಯರು ಸಾವು, ಶವ ಗುರುತಿಸುವಿಕೆಗಾಗಿ ನೇಪಾಳಕ್ಕೆ ಕುಟುಂಬಸ್ಥರ ರವಾನೆ

ಯೇತಿ ವಿಮಾನ ಅಪಘಾತದಲ್ಲಿ ಐವರು ಭಾರತೀಯರು ಸಾವು, ಶವ ಗುರುತಿಸುವಿಕೆಗಾಗಿ ನೇಪಾಳಕ್ಕೆ ಕುಟುಂಬಸ್ಥರ ರವಾನೆ

ಗಾಜಿಪುರ( ಯುಪಿ): ನೇಪಾಳದಲ್ಲಿ ನಡೆದ ಯೇತಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಐವರು ಭಾರತೀಯರ ಸಂಬಂಧಿಕರನ್ನು ಮೃತದೇಹಗಳನ್ನು ಗುರುತಿಸಲು ಸೋಮವಾರ ನೇಪಾಳಕ್ಕೆ ಕಳುಹಿಸಲಾಗಿದೆ.

ವಿಮಾನ ಅಪಘಾತದ ಸಂತ್ರಸ್ತರಲ್ಲಿ ಒಬ್ಬರಾದ ಅನಿಲ್ ಕುಮಾರ್ ರಾಜ್‌ಭರ್ ಅವರ ತಂದೆ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಮ್ಮನ್ನು ನೇಪಾಳ ಗಡಿಗೆ ಕರೆದೊಯ್ಯಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದರು.

ಇನ್ನೂ, ಅವರೊಂದಿಗೆ ಒಬ್ಬ ಪೊಲೀಸ್ ಅಧಿಕಾರಿ ಮತ್ತು ನಿವೃತ್ತ ಅಧಿಕಾರಿ ಕೂಡ ಹೋಗುತ್ತಿದ್ದಾರೆ.

ಐವರು ಭಾರತೀಯರು ಸೇರಿದಂತೆ 72 ಜನರಿದ್ದ ಯೇತಿ ಏರ್‌ಲೈನ್ಸ್ ಪ್ರಯಾಣಿಕ ವಿಮಾನವು ಭಾನುವಾರ ಕೇಂದ್ರ ನೇಪಾಳದ ರೆಸಾರ್ಟ್ ನಗರವಾದ ಪೊಖರಾದಲ್ಲಿ ಹೊಸದಾಗಿ ತೆರೆಯಲಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ಕಮರಿಗೆ ಹೊಡೆದಿದ್ದರಿಂದ ಪತನಗೊಂಡು 68 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.