ಕುಡಿದು ಪೊಲೀಸ್ ವಾಹನ ಅಪಘಾತ ಮಾಡಿದ್ದ ಸಿಬ್ಬಂದಿ ಅಮಾನತು

ಕುಡಿದು ಪೊಲೀಸ್ ವಾಹನ ಅಪಘಾತ ಮಾಡಿದ್ದ ಸಿಬ್ಬಂದಿ ಅಮಾನತು

ಹುಬ್ಬಳ್ಳಿ: ಹೋಳಿ ಹಬ್ಬದ ದಿನದಂದು ಕುಡಿತ ಮತ್ತಿನಲ್ಲಿ ಪೋಲಿಸ್ ಪೆಟ್ರೋಲಿಂಗ್ ವಾಹನವನ್ನು ಚಾಲನೆ ಮಾಡುವಾಗ ರಸ್ತೆಯ ಸೇಫ್ಟಿ ಬ್ಯಾರಿಯರ್ ಗೆ ಗುದ್ದಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಇಬ್ಬರು ಪೋಲಿಸರನ್ನು ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ಅಮಾನತು ಮಾಡಿದ್ದಾರೆ.

ಉತ್ತರ ಸಂಚಾರಿ ಠಾಣೆಯ ಎಎಸ್ ಐ ಉದಯ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಅಮಾನತು ಆದ ಸಿಬ್ಬಂದಿಗಳಾಗಿದ್ದು, ಹೋಳಿ ನಿಮಿತ್ತವಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೋಲಿಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಿಸಿ ಮುತ್ತು ಮಾಗಿ, ಉದಯ ದೊಡ್ಡಮನಿ ಹೈವೇ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯದಲ್ಲಿ ತೆರಳಿದರು. ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ತಾರಿಹಾಳ ಬಳಿ ರಸ್ತೆಯ ಸೇಪ್ಟಿ ಬ್ಯಾರಿಯರ್ ಗೆ ಡಿಕ್ಕಿಯಾಗಿತ್ತು. ಪರಿಣಾಮ ವಾಹನ ಚಾಲನೆ ಮಾಡುತ್ತಿದ್ದ ಮುತ್ತು ಮಾಗಿ ಎಂಬುವವರಿಗೆ ಗಂಭೀರಗಾಯಗಳಾಗಿದ್ದವು‌.ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ಆಯುಕ್ತರು ಸತ್ಯಾಸತ್ಯತೆ ಪರೀಕ್ಷಿಸಿ ಕರ್ತವ್ಯ ಲೋಪ ಎಸಗಿದ ಪೋಲಿಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.