ಸಂಬಳಕ್ಕಾಗಿ ಬೀದಿಗಿಳಿದ ಟಾಟಾ ಕಾರ್ಮಿಕರು

ಸಂಬಳಕ್ಕಾಗಿ ಬೀದಿಗಿಳಿದ ಟಾಟಾ ಕಾರ್ಮಿಕರು

ಧಾರವಾಡದ ಟಾಟಾ ಮಾರ್ಕೊಪೋಲ್ ಕಾರ್ಮಿಕರಿಗೆ ಹೊಸ ವೇತನ ಒಪ್ಪಂದದಂತೆ ಬಾಕಿ ಉಳಿದಿರುವ ವೇತನವನ್ನು ನೀಡುವಂತೆ ಹಾಗೂ ವಜಾಗೊಂಡ ಕಾರ್ಮಿಕರನ್ನು ಮರು ಸೇರ್ಪಡಿಸುವಂತೆ ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ನಗರದಲ್ಲಿಂದು ಕಡಪಾ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಟಾಟಾ ಮಾರ್ಕೊಪೋಲ್ ಹಾಗೂ ಕಾರ್ಮಿಕ ಸಂಘದ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಕಳೆದ ಎರಡು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕಾರ್ಮಿಕರ ಕ್ರಾಂತಿಕಾರಿ ಸಂಘ ಹಾಗೂ ಟಾಟಾ ಆಡಳಿತ ಮಂಡಳಿ ಕಂಪನಿ ಆಂತರಿಕ ತಿಕ್ಕಾಟದಿಂದ ಕಂಪನಿ ಲಾಕೌಟ್ ಕೂಡ ಮಾಡಿತ್ತು. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದು ಈಗ ಇತಿಹಾಸ. ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಸತತ ಪ್ರಯತ್ನದಿಂದ ಟಾಟಾ ಮಾರ್ಕೊಪೋಲ್ ಜೊತೆಗಿನ ಸಂಧಾನ ಯಶಸ್ವಿಯಾಗಿತ್ತು. ಆದರೆ ಇಂದು ತಮ್ಮ ಬೇಡಿಕೆಗಳಿಗೆ ಆಡಳಿತ ಮಂಡಳಿ ಇಲ್ಲಿಯವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿ ಮತ್ತೊಂದು ಹೋರಾಟಕ್ಕೆ ಇಂದು ಕಾರ್ಮಿಕರು ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ. ವಿಚಿತ್ರವೆಂದರೆ ಕಾರ್ಮಿಕರು ತಮ್ಮ ಒಂದು ಈ ಹೋರಾಟದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕರೆದುಕೊಂಡು ಬಂದಿರುವುದು ವಿಶೇಷವಾಗಿತ್ತು.