ಮೋದಿಯಿಂದ ಲಾಭ ಪಡೆಯದವರು ಒಬ್ಬರೂ ಇಲ್ಲ: ಶಾಸಕ ಶರಣು ಸಲಗರ

ಮೋದಿಯಿಂದ ಲಾಭ ಪಡೆಯದವರು ಒಬ್ಬರೂ ಇಲ್ಲ: ಶಾಸಕ ಶರಣು ಸಲಗರ

ಸವಕಲ್ಯಾಣ: 'ಮೋದಿ ಸರ್ಕಾರದಿಂದ ಲಾಭ ಪಡೆಯದವರು ಒಬ್ಬರೂ ಇಲ್ಲ. ಆದರೆ ಈ ಕುರಿತು ಮನೆ ಮನೆಗೆ ಹೋಗಿ ತಿಳಿಸಬೇಕಾದ ಅಗತ್ಯ ಇದೆ. ಇದಕ್ಕಾಗಿ ತಾಲ್ಲೂಕಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ' ಎಂದು ಶಾಸಕ ಶರಣು ಸಲಗರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ವಿಜಯ ಸಂಕಲ್ಪ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

'ಜನವರಿ 21 ರಿಂದ 30 ರವರೆಗೆ ಯಾತ್ರೆ ನಡೆಯಲಿದೆ. ಪ್ರತಿ ಮನೆಗೆ ಭೇಟಿ ನೀಡಲಾಗುತ್ತದೆ. ಮನೆ, ಅಂಗಡಿ, ಕಾರು, ಬೈಕ್‌ಗಳ ಮೇಲೆ ಪಕ್ಷದ ಸ್ಟಿಕರ್ ಅಂಟಿಸಲಾಗುತ್ತದೆ. ದೇಶದ 130 ಕೋಟಿ ಜನರು ಒಂದಿಲ್ಲೊಂದು ರೀತಿಯಲ್ಲಿ ಪ್ರಧಾನಿ ಮೋದಿ ಅವರಿಂದ ಸೌಲಭ್ಯ ಪಡೆದಿದ್ದಾರೆ' ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ಪ್ರಧಾನ ಕಾರ್ಯದರ್ಶಿ ಹಣಮಂತ ಧನಶೆಟ್ಟಿ, ಜ್ಞಾನೇಶ್ವರ ಪಾಟೀಲ, ನಗರಸಭೆ ಸದಸ್ಯ ಸಿದ್ದು ಹಾಗೂ ಉಲ್ಕಾವತಿ ಇದ್ದರು.