2011 ವಿಶ್ವಕಪ್ ಫೈನಲ್ ನಲ್ಲಿ ಧೋನಿ ಬಗ್ಗೆ 'ಕೇಳದ ಕಥೆ' ಹಂಚಿಕೊಂಡ ಗೌತಮ್ ಗಂಭೀರ್

2011 ವಿಶ್ವಕಪ್ ಫೈನಲ್ ನಲ್ಲಿ ಧೋನಿ ಬಗ್ಗೆ 'ಕೇಳದ ಕಥೆ' ಹಂಚಿಕೊಂಡ ಗೌತಮ್ ಗಂಭೀರ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಹೇಗೆ ತಮ್ಮನ್ನು ಪ್ರೋತ್ಸಾಹಿಸಿದ್ದರು ಎಂಬುದನ್ನು ಗೌತಮ್ ಗಂಭೀರ್ ಹಂಚಿಕೊಂಡಿದ್ದಾರೆ. ಅಂದಿನ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದಾಗ ತಿಸಾರಾ ಪೆರೆರಾ ಬೌಲಿಂಗ್ ನಲ್ಲಿ ಬೌಲ್ಡ್ ಆಗಿದ್ದರು. ನವದೆಹಲಿ: ಸುಮಾರು 12 ವರ್ಷಗಳ ನಂತರ ಭಾರತ ತನ್ನ ನೆಲದಲ್ಲಿ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್ ಅತಿಥ್ಯ ವಹಿಸಿಕೊಳ್ಳುತ್ತಿದೆ. 2011ರಲ್ಲಿ ತವರು ನೆಲದಲ್ಲಿ ನಡೆದ ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಎರಡನೇ ಬಾರಿಗೆ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಹೇಗೆ ತಮ್ಮನ್ನು ಪ್ರೋತ್ಸಾಹಿಸಿದ್ದರು ಎಂಬುದನ್ನು ಗೌತಮ್ ಗಂಭೀರ್ ಹಂಚಿಕೊಂಡಿದ್ದಾರೆ. ಅಂದಿನ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದಾಗ ತಿಸಾರಾ ಪೆರೆರಾ ಬೌಲಿಂಗ್ ನಲ್ಲಿ ಬೌಲ್ಡ್ ಆಗಿದ್ದರು.
ಈ ಕುರಿತಂತೆ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನ ಬಳಿಕ ಸ್ಟಾರ್ ಸ್ಫೋರ್ಟ್ ನಲ್ಲಿ ಮಾತನಾಡಿದ ಗಂಭೀರ್, ಎಂಎಸ್ ಧೋನಿ ಅತ್ಯಂತ ಪ್ರೋತ್ಸಾಹದಾಯಕರು. ನಾನು ಶತಕ ಗಳಿಸಲು ಅವರು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಶತಕ ಗಳಿಸಲು ಟೈಮ್ ತೆಗೆದುಕೊಳ್ಳುವಂತೆ, ಒತ್ತಡ ಹಾಕಿಕೊಳ್ಳದಂತೆ ಓವರ್ ಗಳ ನಡುವೆ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು. ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಭಾರತಕ್ಕೆ 275 ರನ್ ಗಳ ಗುರಿ ನೀಡಿತ್ತು.