ಜೋಶಿಮಠದ ಸಿಂಘರ್‌ನಲ್ಲಿ ಧರೆಗುರುಳಿದ ಮನೆಗಳು, ದೇವಸ್ಥಾನ. ಆತಂಕದಲ್ಲಿ ಜನ

ಸಿಂಘ್ದಾರ್ : ಉತ್ತರಾಖಂಡದ ಜೋಶಿಮಠದ ಸಿಂಘರ್‌ನಲ್ಲಿ ಜನವರಿ 2 ಮತ್ತು 3 ರ ಮಧ್ಯರಾತ್ರಿಯಲ್ಲಿ ಹಲವಾರು ಮನೆಗಳು ಕುಸಿದಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಘಟನೆಗಳಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಹಲವಾರು ಮನೆಗಳು ಮತ್ತು ಹತ್ತಿರದ ದೇವಸ್ಥಾನದಲ್ಲಿ ಬಿರುಕುಗಳು ಕಾಣಿಸಿಕೊಂಡ ನಂತ್ರ, ಅಂತಿಮವಾಗಿ ನೆಲಕ್ಕುರುಳಿವೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ಹರೀಶ್, 'ಜನವರಿ 2 ರಂದು ನಾವು ಮಲಗಿದ್ದಾಗ ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗೋಡೆಗಳು ನೆಲಕ್ಕೆ ಬೀಳಲು ಪ್ರಾರಂಭಿಸಿದಾಗ ನಮಗೆ ಶಬ್ದ ಕೇಳಿಸಿತು. ಆಗ ನಾವು ಭಯಭೀತರಾಗಿ ಹೊರಗೆ ಬಂದು ನೋಡಿದಾಗ ಮನೆ ಕುಸಿದು ಬಿದ್ದಿರುವುದನ್ನು ನೋಡಿದೆವು. ಇಡೀ ರಾತ್ರಿ ನಾವು ಭಯದಿಂದ ಕಳೆದಿದ್ದೇವೆ. ನಂತ್ರ, ಮರುದಿನ ನಮ್ಮನ್ನು ಹತ್ತಿರದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಯಿತು' ಎಂದು ಹೇಳಿದರು.
ಈ ವೇಳೆ ಹಲವು ಪ್ರಮುಖ ದಾಖಲೆಗಳು ಮತ್ತು ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.